ವಲ್ಲಭಭಾಯ್ ವಸ್ರಮ್ಭಾಯ್ ಮರ್ವಾನಿಯಾ ಗುಜರಾತಿನ ಜುನಘಡ್ ಜಿಲ್ಲೆಯ ಕಂದ್ರೋಲ್ ಗ್ರಾಮದ ಕ್ಯಾರೆಟ್ ಬೆಳೆಗಾರ. 95 ವರ್ಷದ ಇವರು ಈ ವರ್ಷದ 9ನೇ ನ್ಯಾಷನಲ್ ಗ್ರಾಸ್ರೂಟ್ಸ್ ಇನ್ನೋವೇಶನ್ ಅವಾರ್ಡ್ ಪಡೆದವರ ಪೈಕಿ ಒಬ್ಬರು.
1943ನೇ ಇಸವಿಯಲ್ಲಿ ಸುಮಾರು 13 ವರ್ಷದವರಿದ್ದಾಗ ಶಾಲೆ ತೊರೆದು ತಂದೆಯೊಂದಿಗೆ ಕೃಷಿ ಆರಂಭಿಸಿದ್ದರು. ತಮ್ಮ 5 ಎಕರೆ ಭೂಮಿಯಲ್ಲಿ ಇವರ ತಂದೆ ದವಸಧಾನ್ಯ, ನೆಲಕಡಲೆಗಳನ್ನು ಬೆಳೆಯುತ್ತಿದ್ದರು. ಆಗ ಕ್ಯಾರೆಟ್ನ್ನೂ ಕೂಡ ಬೆಳೆಯಲಾಗುತ್ತಿತ್ತು, ಆದರೆ ಗೋವುಗಳ ಆಹಾರಕ್ಕೆಂದು ಮಾತ್ರವಲ್ಲ. ಮನುಷ್ಯರು ಇದನ್ನು ತಿನ್ನುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ.
ಗೋವಿಗೆ ಕ್ಯಾರೆಟ್ನ್ನು ಆಹಾರವಾಗಿ ನೀಡುತ್ತಿದ್ದ ವೇಳೆ ಅದರ ರುಚಿ ನೋಡಿದ ವಲ್ಲಭಾಭಾಯ್ ಅವರು ಇದನ್ನು ಹೆಚ್ಚು ಬೆಳೆಯುವಂತೆ ತಮ್ಮ ತಂದೆಗೆ ಸಲಹೆ ನೀಡಿದ್ದರು. ಆದರೆ ದನಗಳಿಗೆ ಕೊಡುವ ಕ್ಯಾರೆಟ್ ಬಗ್ಗೆ ಮಗ ಕೊಡುತ್ತಿರುವ ಸಲಹೆ ನೋಡಿ ಅವರ ತಂದೆ ನಕ್ಕಿದ್ದರು. ಕೊನೆಗೆ ವಲ್ಲಭಭಾಯ್ ಅವರೇ ಅಗೆದು ಕ್ಯಾರೆಟ್ ತೆಗೆದು ಮಾರುಕಟ್ಟೆಗೆ ಕೊಂಡೊಗಿದ್ದರು. ಆದರೆ ವ್ಯಾಪಾರಿಗಳಿಗೂ ಕ್ಯಾರೆಟ್ನ್ನು ಜನರು ತಿನ್ನಬಹುದು ಎಂಬ ಕಲ್ಪನೆ ಇರಲಿಲ್ಲ. ಮೊದಲಿಗೆ ತೆಗದುಕೊಳ್ಳಲು ನಿರಾಕರಿಸಿದರು. ಬಳಿಕ ವಲ್ಲಭಭಾಯ್ ಅವರು ವಿವರಿಸಿ ರುಚಿ ತೋರಿದ ಬಳಿಕ ಖರೀದಿ ಮಾಡಿದರು. ಬಳಿಕ ಜನರೂ ಅದರ ರುಚಿ ಸವಿದರು. ಇದು ಕ್ಯಾರೆಟ್ ಬೇಡಿಕೆಯನ್ನು ಹೆಚ್ಚಿಸಿತು.ಇದರಿಂದ ದಿನಕ್ಕೆ ವಲ್ಲಭಭಾಯ್ ರೂ.8 ಸಂಪಾದನೆ ಮಾಡಿದ್ದರು. ಅಂದಿನ ಕಾಲಕ್ಕೆ ಅದು ದೊಡ್ಡ ಮೊತ್ತ. ಹೀಗಾಗೀ ಅವರ ತಂದೆ ಆಶ್ಚರ್ಯ ಚಕಿತಗೊಂಡಿದ್ದರು.
ಅಲ್ಲಿಂದ ವಲ್ಲಭಭಾಯ್ ಅವರಿಗೆ ಕ್ಯಾರೆಟ್ ಬೆಳೆಯಲು ಅವರ ತಂದೆಯ ಸಹಾಯವೂ ಸಿಕ್ಕಿತು. ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಕ್ಯಾರೆಟ್ ಬೆಳೆಯಲಾರಂಭಿಸಿದರು. ಅದರ ಬೇರುಗಳು ತುಂಬಾ ಉದ್ದವಿದ್ದುದು ಕೆಲವರಿಗೆ ಇಷ್ಟವಾಗುತ್ತಿರಲಿಲ್ಲ. ಈ ಕಾರಣ ನಿರ್ದಿಷ್ಟ ಮಣ್ಣಿನಡಿ ಬೇರುಗಳು ವಿಸ್ತರಿಸುವಂತೆ ಬೆಳೆಸಿದರು. ಹನಿ ನೀರಾವರಿ ಆರಂಭಿಸಿದರು.
ನಿಧಾನಕ್ಕೆ 5 ಎಕರೆಯಿಂದ 40 ಎಕರೆಗೆ ಕೃಷಿ ಭೂಮಿಯನ್ನು ವಿಸ್ತರಿಸಿದ ಇವರು, 1985ರ ವೇಳೆಗೆ ಹೆಚ್ಚು ಹೆಚ್ಚು ಕ್ಯಾರೆಟ್ ಬೆಳೆಯಲಾರಂಭಿಸಿದರು. ಆ ವೇಳೆಗೆ ಕ್ಯಾರೆಟ್ ಪೂರೈಸುವ ಏಕೈಕ ಕೃಷಿಕ ಇವರಾಗಿದ್ದರು. ಇವರ ಕ್ಯಾರೆಟ್ ಮಧುವನ್ ಗಾಜರ್ ಎಂದೇ ಖ್ಯಾತವಾಯಿತು.
1 ಎಕೆರೆಯಲ್ಲಿ ಸುಮಾರು 40-50 ಟನ್ ಗಾಜರ್ ಬೆಳೆ ಬೆಳೆಯುತ್ತಿದೆ. ಇದೀಗ ಅದು ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಭಾರೀ ಫೇಮಸ್ ಆಗಿದೆ.
ತಮ್ಮ ಸಾಧನೆಗಾಗಿ ವಲ್ಲಭಭಾಯ್ ಹಲವಾರು ಪ್ರಶಸ್ತಿಗಳನ್ನು ಜಯಿಸಿದ್ದಾರೆ. 95 ವರ್ಷದ ಅವರು ಈಗಲೂ ಹೊಲಕ್ಕೆ ಹೋಗುತ್ತಾರೆ. ಅವರ ಮಾರ್ಗದರ್ಶನದಲ್ಲೇ ಅವರ ಮಗ ಮತ್ತು ಕುಟುಂಬ ಗಾಜರ್ ಬೆಳೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.