ಎಂಐಟಿಯಲ್ಲಿನ ಭಾರತೀಯ ವಿಜ್ಞಾನಿಗಳು ವಾಸ್ತವ ಜೀವನದಲ್ಲಿ ನಡೆಯುವ ಲೈಂಗಿಕ ಹಲ್ಲೆಗಳನ್ನು ಪತ್ತೆ ಮಾಡುವ ಸೆನ್ಸಾರ್ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಸ್ಟಿಕರನ್ನು ಹೋಲುವ ಧರಿಸಬಹುದಾದಂತಹ ಸೆನ್ಸಾರ್ ಇದಾಗಿದ್ದು, ಅತ್ಯಾಚಾರದಂತ ಕೃತ್ಯ ನಡೆದಾಗ ತಕ್ಷಣವೇ ಸಮೀಪದ ಜನರನ್ನು ಮಾತ್ರವಲ್ಲದೇ ಸ್ನೇಹಿತರನ್ನು, ಕುಟುಂಬ ಸದಸ್ಯರನ್ನು ಎಚ್ಚರಿಸುತ್ತದೆ.
ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯ ರಿಸರ್ಚ್ ಅಸಿಸ್ಟೆಂಟ್ ಆಗಿರುವ ಮನಿಶಾ ಮೋಹನ್ ಈ ಸೆನ್ಸಾರನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸೆನ್ಸಾರನ್ನು ಸ್ಟಿಕರ್ ರೀತಿಯಲ್ಲಿ ಬಟ್ಟೆಯಲ್ಲಿ ಬಳಸಬಹುದು.
ಇದನ್ನು ಧರಿಸಿದವರ ಮೇಲೆ ಹಲ್ಲೆ, ಬಲವಂತಗಳು ನಡೆದರೆ ತಕ್ಷಣವೇ ಇದು ಸುತ್ತಮುತ್ತಲ ಜನರನ್ನು ಅಲರ್ಟ್ ಮಾಡುತ್ತದೆ. ಬಲವಂತ ಮತ್ತು ಸಾಮಾನ್ಯ ಸ್ಪರ್ಶವನ್ನು ಗ್ರಹಿಸುವ ಸಾಮರ್ಥ್ಯ ಈ ಸೆನ್ಸಾರ್ಗಿದೆ.
ಸ್ಮಾರ್ಟ್ಫೋನ್ಗೆ ಕನೆಕ್ಟ್ ಮಾಡಿದ ಏಕೀಕೃತ ಬ್ಲೂಟೂತ್ ದೊಡ್ಡ ಶಬ್ದ ಮಾಡಿ ಸುತ್ತಲ ಜನರನ್ನು ಅಲರ್ಟ್ ಮಾಡಲಿದೆ. ಅಲ್ಲದೇ ಮೊದಲೇ ನಿಗದಿಪಡಿಸಿದ ಕುಟುಂಬ ಸದಸ್ಯರಿಗೆ ಅಪಾಯದ ಸೂಚನೆ ರವಾನಿಸಲಿದೆ.
ಮನಿಶಾ ಅವರು ಚೆನ್ನೈನ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ. ಸ್ವ ಅನುಭವಗಳು ಅವರನ್ನು ಇಂತಹದೊಂದು ಸೆನ್ಸಾರ್ ಅಭಿವೃದ್ಧಿಪಡಿಸಲು ಪ್ರೇರಣೆ ನೀಡಿದೆ. ಈ ಸೆನ್ಸಾರ್ನಿಂದ ಹಲವಾರು ರೇಪ್ ಪ್ರಕರಣಗಳನ್ನು ತಡೆಯಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.