ನವದೆಹಲಿ: ಆಮ್ ಆದ್ಮಿ ಪಕ್ಷ ಅಥವಾ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೆಹಲಿ ಮಾಡಿದ ಪ್ರಯೋಗ ಬಹಳ ದುಬಾರಿಯಾಗಿ ಪರಿಣಮಿಸುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಬಿಜೆಪಿ ದೆಹಲಿ ಘಟಕ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೆಹಲಿಯ ಜನರು ಚುನಾವಣೆಯಲ್ಲಿ ನೂತನ ಪಕ್ಷವನ್ನು ಆಯ್ಕೆ ಮಾಡುವ ಮೂಲಕ ಹೊಸ ಪ್ರಯೋಗವನ್ನು ಮಾಡಿದರು, ಆದರೆ ಇದು ತುಂಬಾ ದುಬಾರಿ ಪ್ರಯೋಗ, ಆಡಳಿತ ನಡೆಸುವುದು ಎಎಪಿಯ ಗುರಿಯಲ್ಲ’ ಎಂದರು.
‘ಇತರ ರಾಜ್ಯಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಆಡಳಿತ ನಡೆಸುವುದು ಕಷ್ಟವಲ್ಲ. ಜಮ್ಮು ಕಾಶ್ಮೀರ, ಛತ್ತೀಸ್ಗಢ ರಾಜ್ಯಗಳಲ್ಲಿರುವ ಸವಾಲು ಇಲ್ಲಿ ಇಲ್ಲ. ಒಂದು ರಾಜ್ಯವನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಉದಾಹರಣೆ. ದೆಹಲಿಯೂ ಜಾಗತಿಕ ನಗರವಾಗಿ ಬದಲಾಗುವ ಅವಕಾಶವಿತ್ತು, ಪ್ರವಾಸೋದ್ಯಮ ಮತ್ತು ವಾಣಿಜ್ಯೋದ್ಯಮಗಳಿಗೆ ಇಲ್ಲಿ ಬಹಳಷ್ಟು ಅವಕಾಶವಿದೆ’ ಎಂದರು.
‘ಅಭೂತಪೂರ್ವ ಜನಾದೇಶದೊಂದಿಗೆ ಆಡಳಿತಕ್ಕೆ ಬಂದಿರುವ ಎಎಪಿ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು, ಜನರಿಗೆ ಆಡಳಿತ ಬೇಕೇ ಹೊರತು ವಿವಾದ, ಬಿಕ್ಕಟ್ಟುಗಳಲ್ಲ. ಇದನ್ನು ಅವರು ಅರಿತುಕೊಳ್ಳದೇ ಹೋದರೆ, ಅವರು ಅರಿಯುವಂತೆ ಮಾಡುವುದು ನಮ್ಮ ಜವಾಬ್ದಾರಿ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.