5 ವರ್ಷಗಳ ಟಾರ್ಗೆಟ್ ಇಟ್ಟು 2014ರ ಗಾಂಧೀ ಜಯಂತಿಯಂದು ಆರಂಭವಾದ ಸ್ವಚ್ಛಭಾರತ ಅಭಿಯಾನ ಟಾರ್ಗೆಟ್ನ ಅರ್ಧ ಅವಧಿಯನ್ನು ಪೂರೈಸಿದೆ. ಆದರೆ ನಿಗದಿತ ಟಾರ್ಗೆಟ್ನ್ನು ತಲುಪುವಲ್ಲಿ ವಿಫಲವಾಗಿದೆ. ಹೀಗಾಗೀ ಕೇಂದ್ರ ಮುಂದಿನ ಅವಧಿಯಲ್ಲಿ ಸಾಧನೆಯನ್ನು ಹಿಂದಿನ ಅವಧಿಗಿಂತ ದುಪ್ಪಟ್ಟುಗೊಳಿಸಲು ಕಾರ್ಯೋನ್ಮುಖವಾಗಿದೆ.
ದೇಶದ ದೊಡ್ಡ ರಾಜ್ಯವಾದ ಉತ್ತರಪ್ರದೇಶ ಇದೀಗ ಕೇಂದ್ರದೊಂದಿಗೆ ಕೈಜೋಡಿಸಿದ್ದು, ಮುಂದಿನ ಅಕ್ಟೋಬರ್ನೊಳಗೆ ರಾಜ್ಯವನ್ನು ಬಯಲು ಶೌಚ ಮುಕ್ತಗೊಳಿಸುವುದಾಗಿ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಭರವಸೆ ನೀಡಿದ್ದಾರೆ. ಈಗಾಗಲೇ 150 ಜಿಲ್ಲೆಗಳನ್ನು ಬಯಲು ಶೌಚ ಮುಕ್ತಗೊಳಿಸಲಾಗಿದೆ.
ಉತ್ತರಪ್ರದೇಶದ ಈ ಭರವಸೆಯಿಂದ ಕೇಂದ್ರಕ್ಕೆ ಹೊಸ ಆಶಾಕಿರಣ ಸಿಕ್ಕಿದೆ. ಈಗಾಗಲೇ ಕೇರಳ, ಹಿಮಾಚಲ ಪ್ರದೇಶ, ಸಿಕ್ಕಿಂ, ಉತ್ತರಖಂಡ, ಹರಿಯಾಣಗಳು ಬಯಲು ಶೌಚ ಮುಕ್ತಗೊಂಡಿದೆ. ಈ ಬಾರಿಯ ಅಕ್ಟೋಬರ್ ವೇಳೆಗೆ ಗುಜರಾತ್ ಕೂಡ ಈ ಪಟ್ಟಿಗೆ ಸೇರುವ ಸಾಧ್ಯತೆ ಇದೆ.
ನಿತೀಶ್ ಕುಮಾರ್ ಅವರ ಬಿಹಾರ ಮತ್ತು ನವೀನ್ ಪಟ್ನಾಯಕ್ ಅವರ ಒರಿಸ್ಸಾ ಕೂಡ ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಸಾಕಷ್ಟು ಶ್ರಮಿಸುತ್ತಿದೆ. ಅರ್ಧದಷ್ಟು ಬಯಲುಶೌಚತೆಯಿಂದ ಮುಕ್ತಿ ಪಡೆದಿರುವ ಈ ರಾಜ್ಯಗಳು ವೇಗವಾಗಿ ಗುರಿ ಮುಟ್ಟುವತ್ತ ಓಟವಿಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.