ರಾಮೇಶ್ವರಂ : ದೇಶದ ಮೆಚ್ಚಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ 2ನೇ ಪುಣ್ಯತಿಥಿಯ ಅಂಗವಾಗಿ ಮುಂದಿನ ಗುರುವಾರ ರಾಮೇಶ್ವರಂಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೇ ವೇಳೆ ಕಲಾಂ ಅವರ ಕೊನೆಯ ಆಸೆಯನ್ನೂ ಪೂರೈಸಲಿದ್ದಾರೆ.
ಕಲಾಂ ಅವರ ಹಿರಿಯ ಸಹೋದರ ಮೊಹಮ್ಮದ್ ಮುತು ಮೀರ ಲೆಬ್ಬೈ ಮರಕೈಯರ್ ಅವರ 100ನೇ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಲು ಸುಗಂಧ ದ್ರವ್ಯದ ಪ್ಯಾಕ್ವೊಂದನ್ನು ಕಲಾಂ ತಮ್ಮ ಕಪಾಟಿನಲ್ಲಿ ಎತ್ತಿಟ್ಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿ ಕಲಾಂ ದೈವಾಧೀನರಾದರು.
ಕಳೆದ ನವೆಂಬರ್ನಲ್ಲಿಯೇ ಮುತು ಮೀರ ಅವರ 100ನೇ ಜನ್ಮದಿನ ನಡೆದಿದೆ. ಕಾಲಂ ನಿಧನದ ಹಿನ್ನಲೆಯಲ್ಲಿ ಅವರ ಕುಟುಂಬ ಅದನ್ನು ಸಂಭ್ರಮದಿಂದ ಆಚರಿಸಿಲ್ಲ.
ಇದೀಗ ಮೋದಿ ರಾಮೇಶ್ವರಂಗೆ ಬರುವ ವೇಳೆ ಮುತು ಅವರ ಜನ್ಮದಿನ ಆಚರಣೆ ನಡೆಯಲಿದ್ದು, ಕಲಾಂ ಕೊನೆ ಆಸೆಯೂ ಪೂರೈಸಲಿದೆ.
ಕಲಾಂ ಕುಟುಂಬಸ್ಥರು ಕಳೆದ ಬುಧವಾರ ಮೋದಿಯನ್ನು ಭೇಟಿಯಾಗಿ ಪುನ್ಯತಿಥಿಗೆ ಮೋದಿಯನ್ನು ಆಹ್ವಾನಿಸಿದ್ದಾರೆ. ಅಲ್ಲದೇ ಕಲಾಂ ಅವರ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.