ಕೆಲಸದ ಒತ್ತಡವನ್ನು ತಗ್ಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ 85 ವರ್ಷದ ಮೆಟ್ರೋ ಮ್ಯಾನ್ ಎಂದೇ ಕರೆಯಲ್ಪಡುವ ಇ.ಶ್ರೀಧರನ್ ಅವರು ಲಕ್ನೋ ಮತ್ತು ಕಾನ್ಪುರ ಮೆಟ್ರೋ ಪ್ರಾಜೆಕ್ಟ್ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು, ಆದರೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ರಾಜೀನಾಮೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಸ್ವತಃ ಶ್ರೀಧರನ್ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದು, ‘ನಾನು ರಾಜೀನಾಮೆ ಸಲ್ಲಿಸಲು ಹೋದಾಗ ಸಿಎಂ ಯೋಗಿ ಅವರು ನಿಮ್ಮ ರಾಜೀನಾಮೆಯನ್ನು ನಾನು ಸ್ವೀಕರಿಸುವುದಿಲ್ಲ. ಬದಲಾಗಿ ವಾರಣಾಸಿ, ಆಗ್ರಾ, ಮೀರತ್ ಮೆಟ್ರೋ ಪ್ರಾಜೆಕ್ಟ್ ಉಸ್ತುವಾರಿಯನ್ನೂ ನಿಮಗೇ ವಹಿಸುತ್ತೇನೆ’ ಎಂದರು ಎಂದಿದ್ದಾರೆ.
ಶ್ರೀಧರನ್ ಅವರು ಮೆಟ್ರೋ ಮ್ಯಾನ್ ಎಂದೇ ಪ್ರಸಿದ್ಧರಾಗಿದ್ದು, ಅವರ ಉಸ್ತುವಾರಿಯಲ್ಲೇ ದೇಶದ ಹಲವಾರು ಮೆಟ್ರೋಗಳು ಅಸ್ತಿತ್ವಕ್ಕೆ ಬಂದಿವೆ. ಈ ಇಳಿ ವಯಸ್ಸಲ್ಲೂ ಅವರು ಹಲವಾರು ಮೆಟ್ರೋ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ,.
ಮೆಟ್ರೋ ಹಾದಿಯಲ್ಲಿ ಇನ್ನೂ ಭಾರತ ಬಹಳಷ್ಟು ಸಾಗಬೇಕಿದೆ. ಚೀನಾ ಪ್ರತಿವರ್ಷ 300ಕಿಮೀ ಮೆಟ್ರೋ ಮಾರ್ಗ ನಿರ್ಮಿಸುತ್ತಿದೆ, ಆದರೆ ನಾವು ಕೇವಲ 22ಕಿಮೀ ನಿರ್ಮಿಸುತ್ತಿದ್ದೇವೆ. ನಗರಗಳು ಉಳಿಯಬೇಕಾದರೆ ಮೆಟ್ರೋ ಭವಿಷ್ಯದಲ್ಲಿ ಅತ್ಯಗತ್ಯ. ವರ್ಷಕ್ಕೆ 200ಕಿಮೀಯಾದರೂ ನಾವು ನಿರ್ಮಿಸುವ ಅಗತ್ಯವಿದೆ ಎಂದು ಶ್ರೀಧರನ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.