ಮಳೆಗಾಲದಲ್ಲಿ ಗಿಡಗಳನ್ನು ನೆಡುವುದು ಮತ್ತು ಅವುಗಳು ದೊಡ್ಡದಾಗುವವರೆಗೆ ಅವುಗಳ ಪೋಷಣೆ ಮಾಡುವ ಕಾಯಕವನ್ನು ಈ ಕುಟುಂಬ ಕಳೆದ 17 ವರ್ಷಗಳಿಂದ ಶ್ರದ್ಧೆಯಿಂದ ಮಾಡುತ್ತಾ ಬಂದಿದೆ. ಇದುವರೆಗೆ ಇವರು 5,500 ಗಿಡಗಳನ್ನು ನೆಟ್ಟಿದ್ದಾರೆ. ಮಾತ್ರವಲ್ಲ, ಕಳೆದ ವರ್ಷ ಚಿಟ್ಟೆ ಉದ್ಯಾನವನವನ್ನೂ ಸ್ಥಾಪನೆ ಮಾಡಿದ್ದಾರೆ. ಇಲ್ಲಿ ಹಲವಾರು ಜಾತಿಯ ಚಿಟ್ಟೆಗಳು ಬಂದು ನೆಲೆಯೂರಿವೆ.
ಮುಂಬಯಿಯ ಗೋರೆಗಾಂವ್(ಪೂರ್ವ)ದಲ್ಲಿ ನೆಲೆಸಿರುವ ಸಂದೀಪ್ ಅತಲ್ಯೆ, ಅವರ ಪತ್ನಿ ವರ್ದಾಯಿನಿ, ಮಗ ಮಲ್ಹರ್ ಮತ್ತು ತಾಯಿ ಆರತಿ ಅವರನ್ನೊಳಗೊಂಡ ಕುಟುಂಬ ಕಳೆದ 17 ವರ್ಷದಿಂದ ಮಳೆಗಾಲದಲ್ಲಿ ಆರೆ ಮಿಲ್ಕ್ ಕಾಲೋನಿಯಲ್ಲಿ ಗಿಡಗಳನ್ನು ನೆಡುತ್ತಾ ಬಂದಿದೆ. ಇವರ ಮೃತರಾಗಿರುವ ತಂದೆ ವಿನಯ್ ಅವರ ಪರಿಸರ ಸಂರಕ್ಷಣೆಯ ಕಾಯಕವನ್ನು ಇವರು ಮುಂದುವರೆಸುತ್ತಿದ್ದಾರೆ. 2000ನೇ ಇಸವಿಯಲ್ಲಿ ಇವರು ಗಿಡ ನೆಡುವುದನ್ನು ಆರಂಭಿಸಿದ್ದರು. ಇದೀಗ ಅವರ ಕುಟುಂಬ ಅದನ್ನು ಮುಂದುವರೆಸಿದ್ದು, ಇದುವರೆಗೆ ಅವರು ನೆಟ್ಟ ಒಟ್ಟು ಗಿಡಗಳ ಸಂಖ್ಯೆ 5,500.
ಕಳೆದ ವರ್ಷದಿಂದ ಇವರ ಕುಟುಂಬ ಆರೆ ಡೈರಿ ಸಮೀಪ ಚಿಟ್ಟೆ ಉದ್ಯಾನವನವನ್ನು ಸ್ಥಾಪನೆ ಮಾಡಿದ್ದು, ಈಗಾಗಲೇ ಅಲ್ಲಿ 15-20 ವಿವಿಧ ಜಾತಿಯ ಚಿಟ್ಟೆಗಳು ಹಾರಾಡುತ್ತಿವೆ.
ಕೇವಲ ಗಿಡ ನೆಟ್ಟು ಬಿಡುವುದು ಮಾತ್ರವಲ್ಲ, ಅವುಗಳು ಸಂಪೂರ್ಣವಾಗಿ ಬೆಳೆದು ನಿಲ್ಲುವವರೆಗೂ ಈ ಕುಟುಂಬದ ಅದರ ಪಾಲನೆ ಪೋಷಣೆ ಮಾಡುತ್ತದೆ. ಪರಿಸರವೊಂದು ಅದ್ಭುತ ಸೌಂದರ್ಯವಾಗಿದ್ದು, ನಮಗೆ ಅದು ಹಲವಾರು ಉಡುಗೊರೆಗಳನ್ನು ನೀಡುತ್ತದೆ. ಅದರ ಋಣ ಸಂದಾಯ ಮಾಡುವುದು ನಮ್ಮ ಕರ್ತವ್ಯ ಎಂದು ನನ್ನ ತಂದೆ ವಿನಯ್ ಹೇಳುತ್ತಿದ್ದರು. ಅದರಂತೆ ನಾವೂ ನಡೆದುಕೊಳ್ಳುತ್ತಿದ್ದೇವೆ ಎಂದು ಸಂದೀಪ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.