ಜನರು ದಾನ ಮಾಡಿದ ಹಳೆಯ ಸುದ್ದಿ ಪತ್ರಿಕೆಗಳನ್ನು ಕಾಗದ ಉತ್ಪಾದಕರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ವಾರದಲ್ಲಿ ಎರಡು ದಿನ ಬಡವರಿಗೆ ಆಹಾರ ನೀಡಲು ಬಳಕೆ ಮಾಡುತ್ತಿದೆ ದೆಹಲಿಯ ಉದಯ್ ಫೌಂಡೇಶನ್ ಎಂಬ ಎನ್ಜಿಓ.
ಈ ಎನ್ಜಿಓ ದೆಹಲಿಯ ಸಫ್ದಾರ್ಜಂಗ್ ಆಸ್ಪತ್ರೆ ಮತ್ತು ಏಮ್ಸ್ ಮುಂಭಾಗದಲ್ಲಿ ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಉಚಿತವಾಗಿ ಆಹಾರವನ್ನು ನೀಡುತ್ತದೆ. ಬಡ ರೋಗಿಗಳು ಮತ್ತು ಅವರ ಕುಟುಂಬಿಕರು ಇಲ್ಲಿ ಹೊಟ್ಟೆ ತುಂಬ ತಿಂದು ಸಂತೃಪ್ತರಾಗುತ್ತಾರೆ.
ಒಂದು ಪ್ಲೇಟ್ ಆಹಾರದ ದರ ರೂ.15 ಆಗಿರುತ್ತದೆ. ಈ ದರವನ್ನು ಎನ್ಜಿಓ 1.5 ಕೆಜಿ ಪೇಪರ್ ಮಾರಾಟ ಮಾಡುವ ಮೂಲಕ ಗಳಿಸುತ್ತದೆ.
ಬಡ ರೋಗಿಗಳು ಈ ಆಸ್ಪತ್ರೆಗಳಿಗೆ ಬಂದು ದಾಖಲಾಗುತ್ತಾರೆ. ವೈದ್ಯಕೀಯ ಚಿಕಿತ್ಸೆಗೆ ಹಣ ಭರಿಸಬೇಕು ಎಂಬ ಕಾರಣಕ್ಕೆ ಇವರ ಕುಟುಂಬಿಕರು ಸರಿಯಾಗಿ ಹೊಟ್ಟೆಗೆ ತಿನ್ನದೆ ಉಪವಾಸ ಕುಳಿತುಕೊಳ್ಳುತ್ತಾರೆ. ಹೀಗಾಗಬಾರದು ಎಂಬ ಉದ್ದೇಶದಿಂದಲೇ ಉದಯ್ ಫೌಂಡೇಶನ್ ಆಸ್ಪತ್ರೆಗಳ ಮುಂಭಾಗದಲ್ಲಿ ಉಚಿತ ಆಹಾರವನ್ನು ಪೂರೈಸುತ್ತಿದೆ.
ಹಳೆ ಸುದ್ದಿ ಪತ್ರಿಕೆಗಳನ್ನು ಈ ಫೌಂಡೇಶನ್ಗೆ ತಂದು ನೀಡುವ ಜನರು ಕೂಡ ಪರೋಕ್ಷವಾಗಿ ಬಡವರ ಹೊಟ್ಟೆ ತುಂಬಿಸಿದ ಪುಣ್ಯವನ್ನು ಸಂಪಾಸನೆ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.