ನವದೆಹಲಿ: ಮನೀಲದಿಂದ 800 ಕಿಲೋಮೀಟರ್ ದೂರದಲ್ಲಿನ ಮರಾವಿ ನಗರದಲ್ಲಿ ಇಸಿಸ್ ಉಗ್ರರ ವಿರುದ್ಧ ಹೋರಾಡುತ್ತಿರುವ ಫಿಲಿಫೈನ್ಸ್ಗೆ ಭಾರತ 3.2 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದೆ.
ಇದೇ ಮೊದಲ ಬಾರಿಗೆ ಭಾರತ ಇನ್ನೊಂದು ದೇಶಕ್ಕೆ ಉಗ್ರರ ವಿರುದ್ಧ ಹೋರಾಡಲು ಆರ್ಥಿಕ ನೆರವು ನೀಡುತ್ತಿರುವುದು. ಮರಾವಿ ನಗರದ ಜನರ ಪರಿಹಾರ ಕಾರ್ಯಕ್ಕೆ ಮತ್ತು ಪುನರ್ವಸತಿ ಕಾರ್ಯಕ್ಕೆ ಈ ಅನುದಾನ ಬಳಕೆಯಾಗಲಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಫಿಲಿಫೈನ್ಸ್ ವಿದೇಶಾಂಗ ಸಚಿವ ಅಲನ್ ಪೀಟರ್ ಅಯೇಟನ್ ಅವರ ನಡುವೆ ಜುಲೈ 6ರಂದು ಮಾತುಕತೆ ನಡೆದಿತ್ತು. ಆ ಬಳಿಕ ಭಾರತ ಆರ್ಥಿಕ ನೆರವನ್ನು ನೀಡಿದೆ.
ಮರಾವಿಯನ್ನು ಇಸಿಸ್ ಉಗ್ರರು ವಶಕ್ಕೆ ಪಡೆದುಕೊಂಡಿದ್ದು, ತನ್ನ ಪ್ರಾಂತ್ಯವನ್ನಾಗಿ ಪರಿವರ್ತಿಸಲು ಮುಂದಾಗಿದ್ದರು. ಅದರ ವಿರುದ್ಧ ಫಿಲಿಫೈನ್ಸ್ ಸೇನೆ ನಿರಂತರ ಹೋರಾಟ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.