ಹಿಂಸಾಚಾರ ಪೀಡಿತ ಪಶ್ಚಿಮಬಂಗಾಳದ ತ್ರಿಮೋಹಿನಿ ಪ್ರದೇಶದ ಬಸಿರ್ಹತ್ ನಗರದ ವೈದ್ಯ ಮತ್ತು ಆತನ ಕಂಪೌಂಡರ್ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಉತ್ತಮ ಉದಾಹರಣೆ ಎನಿಸಿದ್ದಾರೆ.
ವೈದ್ಯ ಕಸೀದ್ ಅಲಿ ಮತ್ತು ಕಂಪೌಂಡರ್ ದೆಬೋಪ್ರಸಾದ್ ಬೊಯಿರಾಗಿ ಅವರು ಕಳೆದ 35 ವರ್ಷದಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಪರಸ್ಪರ ಅನ್ಯೋನ್ಯತೆ, ಪ್ರತೀ ಇವರ ನಡುವೆ ಮಾತ್ರವಲ್ಲ ಇವರ ಕುಟುಂಬದ ನಡುವೆಯೂ ಇದೆ.
ಅಲಿ ತಮ್ಮ ಬಳಿಗೆ ಬರುವ ರೋಗಿಗಳಿಗೆ ಕೇವಲ ಔಷಧಿ ಮಾತ್ರ ನೀಡೋದಿಲ್ಲ, ಬದಲಾಗಿ ಸಾಮರಸ್ಯದ ಸಲಹೆಯನ್ನೂ ನೀಡುತ್ತಾರೆ. ದೆಬೋಪ್ರಸಾದ್ ನನ್ನ ಕುಟುಂಬದವನಿದ್ದಂತೆ, ಆತನಿಗೆ ಒದಗುವ ನಷ್ಟ ತನ್ನ ಕುಟುಂಬಕ್ಕೆ ಉಂಟಾಗುವ ನಷ್ಟದಂತೆ ಎಂದು ಅವರು ವಿವರಿಸುತ್ತಾರೆ.
‘ಕಳೆದ ೫ ವರ್ಷದಿಂದ ನನಗೆ ದೆಬೋಪ್ರಸಾದ್ ಕುಟುಂಬದ ಭದ್ರತೆಯ ಬಗ್ಗೆ ಭಯವಿದೆ. ಸ್ಥಳೀಯ ಮುಸ್ಲಿಂ ಮುಖಂಡರಿಗೆ ಆತನ ಸುರಕ್ಷತೆಯ ಬಗ್ಗೆ ಗಮನ ನೀಡುವಂತೆ ಹೇಳಿದ್ದೇನೆ. ಇಲ್ಲಿ ನಾನು 45 ವರ್ಷದಿಂದ ಕಾರ್ಯ ಮಾಡುತ್ತಿರುವುದರಿಂದ ನಾಯಕರು ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದು ನನ್ನ ಅದೃಷ್ಟ. ದೆಬೋಪ್ರಸಾದ್ ಕುಟುಂಬ ಸುರಕ್ಷಿತವಾಗಿದೆ’ ಎಂದು ಅಲಿ ಭಾವುಕರಾಗಿ ನುಡಿಯುತ್ತಾರೆ.
ದೆಬೋಗೂ ನನ್ನ ಮಕ್ಕಳಿಬ್ಬರಿಗೂ ಯಾವುದೇ ವ್ಯತ್ಯಾಸವಿಲ್ಲ. ಆತನ ಹೆಂಡತಿ ನನ್ನ ಸೊಸೆಯಿದ್ದಂತೆ, ಆತನ ಮಕ್ಕಳು ನನ್ನ ಮೊಮ್ಮಗಳು ಎಂದು ಅಲಿ ಹೇಳುತ್ತಾರೆ.
‘ನಮ್ಮ ಔಷದಾಲಯ ಸಾಮರಸ್ಯದ ಸಂದೇಶವನ್ನು ಪಸರಿಸುವ ಸರಿಯಾದ ಜಾಗ. ವೃತ್ತಿಪರ ನಂಟು ನಮ್ಮನ್ನು ಬಾಂಧವ್ಯದತ್ತ ಕೊಂಡೊಯ್ದಿದೆ. ಬಸಿರ್ಹತ್ನಲ್ಲಿ ಪ್ರೀತಿ, ಸಾಮರಸ್ಯ ಇದೆ ಎಂದು ಹೇಳಲು ನಾವು ಬಯಸುತ್ತೇವೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.