‘ಹೆಲ್ದಿ ಏಜಿಂಗ್’ ಎಂಬ ಎನ್ಜಿಓವೊಂದರ ಸಹಯೋಗದೊಂದಿಗೆ ಏಮ್ಸ್ ದೈಹಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆಯಲ್ಲಿರುವ ಸುಮಾರು 50 ವೃದ್ಧರನ್ನು ದತ್ತು ಪಡೆದುಕೊಳ್ಳಲಿದ್ದು, ಅವರಿಗೆ ಹಿರಿಯ ನಾಗರಿಕರ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ.
ವಿವಿಧ ವೃದ್ಧಾಶ್ರಮಗಳಿಂದ ವೈದ್ಯಕೀಯ ಅಗತ್ಯತೆಯನ್ನು ಪರಿಗಣಿಸಿ ಇವರನ್ನು ದತ್ತು ಪಡೆದುಕೊಳ್ಳಲಾಗುತ್ತದೆ.
ಅಲ್ಲದೇ ಈ ಕಾರ್ಯಕ್ರಮದ ಭಾಗವಾಗಿ ವೃದ್ಧರಿಗೆ ಅವರ ಮನೆಯಲ್ಲಿಯೇ ಉಚಿತ ಔಷಧಿಗಳನ್ನು ನೀಡಲಾಗುತ್ತದೆ. ಅಲ್ಲದೇ ಅಗತ್ಯಬಿದ್ದರೆ ಅವರ ಚಿಕತ್ಸೆಯನ್ನು ತ್ವರಿತಗೊಳಿಸಲಾಗುತ್ತದೆ ಅಥವಾ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ ಎಂದು ಏಮ್ಸ್ ವೈದ್ಯ ಡಾ.ಪ್ರಶೂನ್ ಚ್ಯಾಟರ್ಜಿ ಹೇಳಿದ್ದಾರೆ.
ವೃದ್ಧಾಶ್ರಮಗಳಲ್ಲಿ ಹಿರಿ ಜೀವಗಳಿಗೆ ಆರೋಗ್ಯ ಸೌಲಭ್ಯಗಳು ಇಲ್ಲ ಎಂಬುದು ಅಧ್ಯಯನದಿಂದ ತಿಳಿದು ಬಂದ ಹಿನ್ನಲೆಯಲ್ಲಿ ಏಮ್ಸ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಹೆಚ್ಚಿನ ವೃದ್ಧರು ಡಯಾಬಿಟಿಸ್, ಹೈಪರ್ನೆನ್ಶನ್, ಬಿಪಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ವೈದ್ಯಕೀಯ ಸೌಲಭ್ಯ ಅವರಿಗೆ ಸಿಗುತ್ತಿಲ್ಲ. ಹೀಗಾಗಿ ಎನ್ಜಿಓ ಸಹಯೋಗದೊಂದಿಗೆ ಹಿರಿಜೀವಗಳನ್ನು ಆರೋಗ್ಯ ಸೇವೆ ಒದಗಿಸಲು ಏಮ್ಸ್ ದತ್ತು ಪಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.