ಹೃದಯ ಕಸಿಗೊಳಗಾದ ಕರ್ನಾಟಕದ ಮೊದಲ ಮಹಿಳೆ ರೀನಾ ರಾಜು, ಇದೀಗ ವರ್ಲ್ಡ್ ಟ್ರಾನ್ಸ್ಪ್ಲಾಂಟ್ ಗೇಮ್ಸ್ ಮೀಟ್ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಅಲ್ಲದೇ ಈ ಸಾಧನೆ ಮಾಡುತ್ತಿರುವ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗುತ್ತಿದ್ದಾರೆ.
ಅಂಗಾಂಗ ಕಸಿ ಮಾಡಿಸಿಕೊಂಡವರಿಗೆಂದೇ ಆಯೋಜನೆ ಮಾಡಲಾಗುತ್ತಿರುವ ಗೇಮ್ಸ್ ಇದಾಗಿದ್ದು, ವಲ್ಡ್ ಟ್ರಾನ್ಸ್ಪ್ಲಾಂಟ್ ಗೇಮ್ಸ್ ಫೆಡರೇಶನ್ ಇದನ್ನು ಆಯೋಜನೆ ಮಾಡುತ್ತದೆ.
ಇದರ 12ನೇ ಎಡಿಶನ್ ಸ್ಪೇನ್ನ ಮಾಲ್ಗಾದಲ್ಲಿ ಭಾನುವಾರದಿಂದ ಆರಂಭಗೊಂಡಿದೆ.
ಇದರಲ್ಲಿ ರೀನು ಅವರು ಬ್ಯಾಡ್ಮಿಂಟನ್ ಮತ್ತು 100 ಮೀಟರ್ ಓಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಉತ್ತರ ಪ್ರದೇಶದ ಬಲ್ವೀರ್ ಸಿಂಗ್ ಮತ್ತು ಲಕ್ನೋದ ಧರ್ಮೆಂದ್ರ ಸೋತಿ ಅವರು ಇದರಲ್ಲಿ ಭಾಗವಹಿಸುತ್ತಿರುವ ಇತರ ಇಬ್ಬರು ಭಾರತೀಯರು.
ರೀನು ಅವರು ೨೦೦೯ರಲ್ಲಿ ಚೆನ್ನೈನಲ್ಲಿ ಹೃದಯದ ಕಸಿಗೆ ಒಳಗಾಗಿದ್ದರು. ಅವರ ಹೃದಯ ಕಾರ್ಯ ಮಾಡುವುದನ್ನು ಸ್ಥಗಿತಗೊಳಿಸಿದಾಗ ದಾನಿ ನೀಡಿ ಹೃದಯವನ್ನು ಅವರಿಗೆ ಅಳವಡಿಸಲಾಗಿತ್ತು. ಇದೀಗ ಅವರು ಆರೋಗ್ಯವಂತರಾಗಿದ್ದು, ಅರ್ಥಪೂರ್ಣ ಜೀವನ ನಡೆಸುತ್ತಿದ್ದಾರೆ. ‘ಲೈಟ್ ಎ ಲೈಫ್’ ಎಂಬ ಫೌಂಡೇಶನ್ ಆರಂಭಿಸಿ ಅಂಗಾಂಗ ಕಸಿಗೊಳಗಾದವರಿಗೆ ನೆರವು ನೀಡುತ್ತಿದ್ದಾರೆ.
ಹೃದಯ ಕಸಿಗೂ ಮುನ್ನ ಅವರು ಹಾಕಿ ಆಟಗಾರರಾಗಿದ್ದರು, ಇತ್ತೀಚಿಗೆ ಅವರು ಸ್ಕೈ ಡೈವಿಂಗ್ ಪ್ರಯತ್ನಗಳನ್ನೂ ಮಾಡಿದ್ದಾರೆ, ಓಟದ ತರಬೇತಿ ಪಡೆಯುತ್ತಿದ್ದಾರೆ. ಇದೀಗ ತಮ್ಮ ಫಿಟ್ನೆಸ್ ಸಾಬೀತು ಮಾಡಿ ಟ್ರಾನ್ಸ್ಪ್ಲಾಂಟ್ ಗೇಮ್ಸ್ ಮೀಟ್ನಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಾಧನೆ ಮಾಡುತ್ತಿರುವ ದೇಶದ ಮೊದಲ ಮಹಿಳೆ ಎಂಬ ಕೀರ್ತಿಯನ್ನೂ ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.