ಸರಳ ಜೀವನ ಮತ್ತು ಉನ್ನತ ಚಿಂತನೆಯ ಸಂದೇಶಗಳನ್ನು ಸಾರುವ ಆಟೋ ಇದೀಗ ದೆಹಲಿಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಹಳದಿ ಬಣ್ಣದ ರಿಕ್ಷಾ ಹೊದಿಕೆಯ ತುಂಬಾ ಇರುವ ಕಪ್ಪು ಬಣ್ಣದ ಬರವಣಿಗಳು ಜೀವನ ಪಾಠವನ್ನು ಹೇಳಿಕೊಡುತ್ತವೆ. ಓದುಗರ ಜ್ಞಾನವನ್ನು ವೃದ್ಧಿಸುತ್ತವೆ.
ಅವದೇಶದ್ ಸಿಂಗ್ ರಾಥೂರ್ ಈ ವಿಭಿನ್ನ ರಿಕ್ಷಾದ ಚಾಲಕರಾಗಿದ್ದು, ತನ್ನ ತ್ರಿಚಕ್ರ ವಾಹನವನ್ನು ಜ್ಞಾನದ ವಾಹನವನ್ನಾಗಿ ಪರಿವರ್ತನೆ ಮಾಡಿದ್ದಾರೆ.
‘ಒಳಗೆ ಸನ್ಯಾಸಿಯಾಗಿರಿ, ಹೊರಗೆ ಸಂಸಾರಿಯಾಗಿರಿ’, ‘ಭಾಗ್ಯದಲ್ಲಿ ಇದ್ದುದು ಓಡಿಕೊಂಡಾದರೂ ನಮ್ಮ ಬಳಿಗೆ ಬರುತ್ತದೆ, ಭಾಗ್ಯದಲ್ಲಿ ಇಲ್ಲದೇ ಇದ್ದುದು ಬಂದರೂ ಹೊರಟು ಹೋಗುತ್ತದೆ’, ‘ಸುಳ್ಳು ಹೇಳುವುದು ಅತ್ಯಂತ ಕೆಟ್ಟದು. ಅದನ್ನು ಹೇಳಲು ಒಳ್ಳೆಯದಾಗುತ್ತದೆ ಆದರೆ ಕೇಳಲು ಅಸಹತ್ಯವಾಗುತ್ತದೆ’ ಎಂಬಿತ್ಯಾದಿ ಬರಹಗಳು ಉತ್ತಮ ಮದುಕಿನ ಮೌಲ್ಯವನ್ನು ಸಾರುತ್ತದೆ.
‘ನಮ್ಮ ಚಿಂತನೆಗಳು ಪ್ಯೂರ್ ಆಗಿರಬೇಕು ಆಗ ಮಾತ್ರ ನಾವು ಸಮಾಜದಲ್ಲಿ ಬದಲಾವಣೆ ತರುತ್ತೇವೆ. ನನ್ನ ತಲೆಗೆ ಏನು ಹೊಳೆಯುತ್ತದೆಯೋ ಅದನ್ನು ನಾನು ಆಟೋ ಮೇಲೆ ಬರೆಯುತ್ತೇನೆ. ಅದೊಂದು ಹವ್ಯಾಸವಾಗಿ ಬೆಳೆದಿದೆ. ಪ್ರಯಾಣಿಸುತ್ತಿದ್ದಾಗಲೂ ಏನದರು ತಲೆಗೆ ಹೊಳೆದರೆ ತಕ್ಷಣ ಆಟೋ ನಿಲ್ಲಿಸಿ ಅದನ್ನು ಪುಸ್ತಕದಲ್ಲಿ ಬರೆಯುತ್ತೇನೆ. ಇದಕ್ಕಾಗಿ ಪ್ರಯಾಣಿಕರಲ್ಲಿ ನಾನು ಕ್ಷಮೆಯನ್ನೂ ಕೇಳುತ್ತೇನೆ. ಮನೆಗೆ ಹೋದ ಬಳಿಕ ಆ ಬರಹದ ಶಾಶ್ವತ ಮಾರ್ಕರ್ ಮಾಡುತ್ತೇನೆ’ ಎಂದು ಅವದೇಶ್ ಹೇಳುತ್ತಾರೆ.
ಟ್ರಾಫಿಕ್ ಸಿಗ್ನಲ್ ವೇಳೆಯೂ ಬರೆಯುವ ಇವರು ಕೆಲವೊಮ್ಮೆ ಟ್ರಾಫಿಕ್ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ಇವರ ಆಟೋ ಮೇಲಿನ ಒಳ್ಳೆಯ ಸಂದೇಶಗಳನ್ನು ನೋಡಿ ದಂಡ ಹಾಕದೆ ಕಳುಹಿಸಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.