ಮೈಸೂರು: ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಬುಧವಾರ ವಿಶ್ವ ದಾಖಲೆ ಮಾಡುವ ಗುರಿಯೊಂದಿಗೆ ಅತೀ ಉದ್ದದ ಯೋಗ ಸರಪಳಿಯನ್ನು ರಚಿಸಲಾಯಿತು.
ವಿಶ್ವ ದಾಖಲೆಯನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ ಸುಮಾರು 44 ಸಂಸ್ಥೆಗಳ 8 ಸಾವಿರ ಸಂಖ್ಯೆಯ ವಿದ್ಯಾರ್ಥಿಗಳು ಯೋಗ ಸರಪಳಿ ರಚಿಸಿದರು. ವಿದ್ಯಾರ್ಥಿ ತನ್ನ ಬಲಗಾಲನ್ನು ಮುಂದಿನ ವಿದ್ಯಾರ್ಥಿಯ ಎಡಗಾಲಿನೊಂದಿಗೆ ಲಾಕ್ ಮಾಡುವ ಮೂಲಕ ಸರಪಳಿ ಸೃಷ್ಟಿಸಲಾಯಿತು.
ದಾಖಲೆ ನಿರ್ಮಾಣದ ಈ ಯೋಗ ಸಮಾರಂಭವನ್ನು ದ್ರೋನ್ ಕ್ಯಾಮೆರಾದ ಮೂಲಕ ಸೆರೆ ಹಿಡಿಯಲಾಯಿತು.
ಈ ವಿದ್ಯಾರ್ಥಿಗಳು ವಿಶ್ವ ದಾಖಲೆ ನಿರ್ಮಿಸಿದರೆ ಎಂಬ ಬಗ್ಗೆ ತಿಳಿದುಕೊಳ್ಳಲು ಇನ್ನು 10 ದಿನಗಳು ಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.