ಛತ್ತೀಸ್ಗಢದ ಭಿಲಾಯಿನಲ್ಲಿರುವ ಕೆಫೆಯೊಂದು ತನ್ನ ಅತ್ಯುತ್ತಮ ಕಾಯ್ದಿಂದಾಗಿ ಇಂದು ಜನರ ಮನ್ನಣೆಗೆ ಪಾತ್ರವಾಗುತ್ತಿದೆ. ನಿರ್ದಿಷ್ಟ ಗಡಿಯನ್ನು ದಾಟಿ ಜಗತ್ತನ್ನು ಪರಿವರ್ತನೆಯತ್ತ ಕೊಂಡೊಯ್ಯುವಲ್ಲಿ ಪ್ರೇರಣೆ ನೀಡುತ್ತಿದೆ.
ನುಕ್ಕಾಡ್ ಟೀಫೆ ಎಂಬ ಕೆಫೆಯಲ್ಲಿ ತೃತೀಯ ಲಿಂಗಿ ಮತ್ತು ವಿಕಲಚೇತನ ಸಿಬ್ಬಂದಿಗಳು ಮಾತ್ರ ಇದ್ದಾರೆ. ಈ ಎರಡು ಸಮುದಾಯದವರನ್ನು ಮಾತ್ರ ನಿಯೋಜನೆ ಮಾಡುವ ಮೂಲಕ ಈ ಕೆಫೆ ಎಲ್ಲರನ್ನೂ ಒಟ್ಟುಗೂಡಿಸಿದ ಅಂತರ್ಗತ ಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಪುಟ್ಟ ಕೊಡುಗೆಯನ್ನು ನೀಡುತ್ತಿದೆ.
ಈ ಕೆಫೆ ಗ್ರಾಹಕರನ್ನು ಒಂದು ವಿಭಿನ್ನ ಲೋಕಕ್ಕೆ ಕೊಂಡೊಯ್ಯುತ್ತದೆ. ಫೋನ್ಗಳನ್ನು ಡಿಪೋಸಿಟ್ ಮಾಡಿಸಿ, ಅಪರಿಚಿತರೊಂದಿಗೆ ಅರ್ಥಪೂರ್ಣ ಸಂಭಾಷಣೆಯಲ್ಲಿ ತೊಡಗುವಂತೆ ಮಾಡುತ್ತದೆ. ಬದುಕನ್ನು ಪ್ರತಿಫಲನಗೊಳ್ಳುವಂತೆ ಮಾಡುತ್ತದೆ. ಈ ರೀತಿ ಮಾಡಿದ ಗ್ರಾಹಕರಿಗೆ ಬಿಲ್ನಲ್ಲಿ ಶೇ.೧೦ರಷ್ಟು ರಿಯಾಯಿತಿಯನ್ನೂ ಅದು ನೀಡುತ್ತದೆ. ಈ ಕಾರ್ಯಕ್ರಮಕ್ಕೆ ಡಿಜಿಟಲ್ ಡಿಟಾಕ್ಸ್ ಎಂದು ಹೆಸರಿಡಲಾಗಿದೆ.
ಈ ಕೆಫೆಯ ಮತ್ತೊಂದು ಯೋಜನೆಯೆಂದರೆ ಗ್ಯಾನ್ ದಾನ್. ಇದು ಕೆಫೆಯನ್ನು ಲೈಬ್ರರಿಯಾಗಿ ಪರಿವರ್ತಿಸಿದ್ದು, ಇಲ್ಲಿ ಜನರು ಪುಸ್ತಕವನ್ನು ಪಡೆಯಬಹುದು ಮತ್ತು ನೀಡಬಹುದಾಗಿದೆ.
ಇಲ್ಲಿ ದೃಷ್ಟಿಯಿಲ್ಲದ ಸಿಬ್ಬಂದಿಗಳಿದ್ದು ಅವರೊಂದಿಗೆ ಸಂಭಾಷಣೆ ಮಾಡಲು ಸೈನ್ ಲ್ಯಾಂಗ್ವೇಜ್ನ್ನೂ ಇಲ್ಲಿ ಕಲಿಯಬಹುದಾಗಿದೆ. ಇಲ್ಲಿ ಗೇಮ್ಸ್ಗಳನ್ನು ಆಡಬಹುದು, ಹೊಸ ಸ್ನೇಹಿತರನ್ನು ಸಂಪಾದಿಸಬಹುದಾಗಿದೆ.
ವಿವಿಧ ತರನಾದ ಟೀಗಳು ಇಲ್ಲಿ ಸಿಗುತ್ತವೆ. ಇವುಗಳನ್ನು ಸೈನ್ ಲ್ಯಾಂಗ್ವೇಜ್ ಬಳಸಿ ನಾವು ಆರ್ಡರ್ ಮಾಡಬಹುದಾಗಿದೆ. ಇದರಿಂದ ಅಂಧತ್ವ ಇರುವವರನ್ನು ನಾವು ಸಬಲೀಕರಣಗೊಳಿಸಲು ಪುಟ್ಟ ಕೊಡುಗೆ ನೀಡಿದಂತಾಗುತ್ತದೆ.
ಈ ಅತ್ಯದ್ಭುತ ಕೆಫೆಯ ಹಿಂದೆ ಇರುವವರು ಅದರ ಮಾಲೀಕ ಪ್ರಿಯಾಂಕ್ ಪಾಟೀಲ್. ಆನರ ಬದುಕನ್ನು ಬದಲಾಯಿಸಬೇಕು ಎಂಬ ಗುರಿಯಿಟ್ಟುಕೊಂಡಿರುವ ಇವರು ತೃತೀಯ ಲಿಂಗಿಗಳನ್ನು, ವಿಕಲಚೇತನರನ್ನು ಉದ್ಯೋಗಕ್ಕೆ ನೇಮಿಸುವ ಮೂಲಕ ಅವರನ್ನು ಸ್ವಾವಲಂಬಿಗಳಾಗಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.