ನವದೆಹಲಿ: ಕರ್ತವ್ಯದ ವೇಳೆ ಹುತಾತ್ಮರಾದ ಪ್ಯಾರಮಿಲಿಟರಿ ಸಿಬ್ಬಂದಿಗಳ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುವ ಸಲುವಾಗಿ ಗೃಹಸಚಿವಾಲಯವು ಟ್ವಿಟರ್ ಖಾತೆಯೊಂದನ್ನು ತೆರೆದಿದೆ.
‘@BharatKeVeer’ ಟ್ವಿಟರ್ ಖಾತೆ ಹುತಾತ್ಮರಾದ ಸೈನಿಕರ ಎಲ್ಲಾ ಮಾಹಿತಿಗಳನ್ನು ನೀಡಲಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಗೃಹಸಚಿವ ರಾಜನಾಥ್ ಸಿಂಗ್ ಅವರು, ವೀರ ಹುತಾತ್ಮ ಯೋಧರಿಗೆ ಹಣಕಾಸು ನೆರವು ನೀಡಲು ಗೃಹಸಚಿವಾಲಯ ಆರಂಭಿಸಿದ ಅಭಿಯಾನ ಭಾರತ್ಕೆವೀರ್ ಇದೀಗ ಟ್ವಿಟರ್ನಲ್ಲೂ ಲಭ್ಯವಿದೆ. ‘@BharatKeVeer’ ಅಪ್ಡೇಟ್ಗಳನ್ನು ಫಾಲೋ ಮಾಡಿ ಎಂದಿದ್ದಾರೆ.
ಗೃಹಸಚಿವಾಲಯ ಮತ್ತು ನಟ ಅಕ್ಷಯ್ ಕುಮಾರ್ ಜಂಟಿಯಾಗಿ ಭಾರತ್ಕೆವೀರ್ ಆಪ್ ಮತ್ತು ವೆಬ್ಸೈಟ್ನ್ನು ಕಳೆದ ಎಪ್ರಿಲ್ನಲ್ಲಿ ಬಿಡುಗಡೆಗೊಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.