ರಸ್ತೆ ಬದಿಯ ವಡಾ ವ್ಯಾಪಾರಿಯೊಬ್ಬನ ವೈದ್ಯಕೀಯ ಖರ್ಚನ್ನು ಆತನ ಗ್ರಾಹಕರು ಭರಿಸಿದ ಅಪರೂಪದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ.
50 ವರ್ಷ ಕೀಮ ವಡಾ ಮಾರಟಾಗಾರ ಜಾವೇದ್ ಖಾನ್ ಸಕ್ಕರೆ ಕಾಯಿಲೆ ಬಳಲುತ್ತಿದ್ದು, ಇದೀಗ ಅವರ ಒಂದು ಕಾಲನ್ನು ತೆಯಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಇದರ ಸರ್ಜರಿಗಾಗಿ ಲಕ್ಷಗಳು ತಗಲಿದೆ ಆದರೆ ಬಡಪಾಯಿ ಜಾವೇದ್ಗೆ ಅಷ್ಟೊಂದು ಹಣ ಹೊಂದಿಸುವುದು ಕಷ್ಟಸಾಧ್ಯ.
ಆದರೆ ಜಾವೇದ್ ಅವರ ಈ ಕಠಿಣ ಪರಿಸ್ಥಿತಿಯಲ್ಲಿ ಅವರ ಕೈ ಹಿಡಿದಿದ್ದಾರೆ ಅವರ ಗ್ರಾಹಕರು. ವೈದ್ಯಕೀಯ ಬಿಲ್ ರೂ. 1.4 ಲಕ್ಷವನ್ನು ಒಟ್ಟಾಗಿ ಹೊಂದಿಸಿ ಪಾವತಿಸಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಅವರ ಫಿಲ್ಮ್ ಮೇಕರ್ ಗ್ರಾಹಕ ಅರವಿಂದ್ ಅವರ ಸಹಕಾರದಿಂದ.
ಅರವಿಂದ್ ಅವರು ಕೊಯಂಬತ್ತೂರು ಬಾಂಬ್ ಸ್ಫೋಟದ ಬಗ್ಗೆ ಕಿರು ಚಿತ್ರ ನಿರ್ಮಿಸುತ್ತಿದ್ದ ವೇಳೆ ಜಾವೇದ್ ಅವರ ಅಂಗಡಿಗೆ ಬಂದು, ಅವರೊಂದಿಗೆ ಹರಟಿ ತಿಂಡಿ ತಿಂದು ಹೋಗುತ್ತಿದ್ದರು. ಆದರೆ ಏಳು ವರ್ಷಗಳ ಬಳಿಕ ಇತ್ತೀಚಿಗೆ ಅವರ ಅಂಗಡಿಗೆ ಹೋದಾಗ ಅದು ಮುಚ್ಚಿತ್ತು. ಸ್ಥಳಿಯ ಜನರನ್ನು ವಿಚಾರಿಸಿದಾಗ ಜಾವೇದ್ ಅವರ ಪರಿಸ್ಥಿತಿ ತಿಳಿಯಿತು. ತಕ್ಷಣ ಅವರನ್ನು ಭೇಟಿಯಾದಾಗ ಅವರ ಸರ್ಜರಿಗೆ ಹಣಕಾಸು ಕೊರತೆಯಿದೆ ಎಂಬುದು ತಿಳಿಯಿತು.
ಅರವಿಂದ್ ಅವರು ಜಾವೇದ್ ಅವರ ಪರಿಸ್ಥಿತಿಯ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ತಕ್ಷಣವೇ 1.5 ಲಕ್ಷ ರೂಪಾಯಿ ಹೊಂದಿಕೆಯಾಗಿದೆ. ಹಣ ನೀಡಿದವರಲ್ಲ್ಲಿ ಹೆಚ್ಚಿನವರು ಜಾವೇದ್ ಅವರ ಗ್ರಾಹಕರೂ ಆಗಿದ್ದರು. ದೇಶ ಮತ್ತು ವಿದೇಶಗಳಲ್ಲಿ ಇದ್ದವರೂ ಇವರಿಗೆ ಹಣ ಕಳುಹಿಸಿಕೊಟ್ಟಿದ್ದಾರೆ. ಇದರಲ್ಲಿ ಜಾವೇದ್ ಅವರ ಸರ್ಜರಿಗೆ 1 ಲಕ್ಷ ಖರ್ಚಾಗಿದೆ. ಉಳಿದ ಹಣವನ್ನು ಅವರ ಅಂಗಡಿಗೆ ವ್ಯಯಿಸಲು ನಿರ್ಧರಿಸಲಾಗಿದೆ.
ಗ್ರಾಹರೊಬ್ಬರು ತನ್ನ ಮೇಲೆ ತೋರಿಸಿದ ಅಪೂರ್ವ ಪ್ರೀತಿ ಮತ್ತು ಕಾಳಜಿಗೆ ಚಿರಋಣಿ ಎಂದು ಜಾವೇದ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.