ಓಂಕಾರ, ಹಿಂದೂ ದೇವರುಗಳ ಭಾವಚಿತ್ರಗಳನ್ನು ಉಡುಗೆ, ಚಪ್ಪಲಿಗಳ ಮೇಲೆ ಹಾಕಿ ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿ ಬೆಳೆದು ಬಿಟ್ಟಿದೆ. ಹಲವಾರು ಸಂಸ್ಥೆಗಳು ಹಿಂದೂಗಳ ತೀವ್ರ ವಿರೋಧದ ನಂತರ ಇಂತಹ ಕೃತ್ಯ ಎಸಗುವುದನ್ನು ನಿಲ್ಲಿಸಿದೆ.
ಆದರೂ ಕೆಲವೊಂದು ಅಂತಾರಾಷ್ಟ್ರೀಯ ಆನ್ಲೈನ್ ಮಾರ್ಕೆಟ್ಗಳಲ್ಲಿ ಇಂತಹ ಆವಾಂತರಗಳು ಇನ್ನೂ ಮುಂದುವರೆದೇ ಇದೆ. ಅವುಗಳಲ್ಲಿ ಪನಾಮದ ಕ್ರಶ್ ಸ್ಟೋರ್ ಕೂಡ ಒಂದು.
ಹಿಂದೂಗಳನ್ನು ಕೆಣಕಿ ಅವರ ತಾಳ್ಮೆ ಪರೀಕ್ಷಿಸಲೋ ಎಂಬಂತೆ ಕ್ರಶ್ ಸ್ಟೋರ್ ವೆಬ್ಸೈಟ್ನಲ್ಲಿ ಗಣೇಶ, ಓಂಕಾರದ ಭಾವಚಿತ್ರವಿರುವ ಶೂ, ಲೆಗ್ಗಿನ್ಸ್, ಸಾಕ್ಸ್ಗಳನ್ನು ಬಿಡುಗಡೆಗೊಳಿಸಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾಗಿದೆ.
ಟೀಶರ್ಟ್, ಟಾಪ್ ಮತ್ತು ಬ್ಯಾಗ್ಗಳ ಮೇಲೆ ಗಣೇಶನ ಚಿತ್ರವಿದೆ. ಇದಾದರೂ ಅವಹೇಳನ ಮಾಡುವಂತಹದ್ದಲ್ಲ. ಆದರೆ ದೇವರ ಚಿತ್ರವನ್ನು ಶೂ, ಸಾಕ್ಸ್ಗಳಲ್ಲಿ ಬಳಸುವುದು ನಿಜಕ್ಕೂ ಹಿಂದೂಗಳ ಭಾವನೆಗಳಿಗೆ ಅವಹೇಳನ ಮಾಡಿದಂತೆ.
ಸರ್ಕಾರ ಕೂಡಲೇ ಎಚ್ಚೆತ್ತು ಇಂತಹ ವೆಬ್ಸೈಟ್ಗಳ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಅವುಗಳನ್ನು ಬ್ಯಾನ್ ಮಾಡಬೇಕಿದೆ.
ಕೆಲವು ಲಿಂಕ್ಗಳನ್ನು ನೀಡಲಾಗಿದೆ. ನೀವೂ ನೋಡಿ. ಈ ಕೂಡಲೇ ಇದರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ.
https://goo.gl/pJac0y
https://goo.gl/st4vUl
https://goo.gl/st4vUl
https://goo.gl/SiHh6E
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.