ಕಠ್ಮಂಡು: ಭೂಕಂಪ ಪೀಡಿತ ನೇಪಾಳದಲ್ಲಿ ಪರಿಹಾರ ಸಮಾಗ್ರಿಗಳನ್ನು ವಿತರಿಸುತ್ತಿದ್ದ ಸಂದರ್ಭ ಪತನಗೊಂಡ ಅಮೆರಿಕಾದ ಹೆಲಿಕಾಫ್ಟರ್ನ ಅವಶೇಷಗಳಿಂದ 8 ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಶನಿವಾರ ನೇಪಾಳ ಸೇನೆ ತಿಳಿಸಿದೆ.
ಭೂಕಂಪ ಸಂಭವಿಸಿದ ಬಳಿಕ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕಾದ ಯುಎಚ್-1ವೈ ಹುಯಿ ಎಂಬ ಹೆಲಿಕಾಫ್ಟರ್ ನಾಪತ್ತೆಯಾಗಿತ್ತು, ಇದರಲ್ಲಿ ೬ ಅಮೆರಿಕಾದ ನೌಕಾ ಸಿಬ್ಬಂದಿಗಳು ಮತ್ತು ಇಬ್ಬರು ಯೋಧರಿದ್ದರು.
ಶುಕ್ರವಾರ ಅದರ ಅವಶೇಷಗಳು ಪತ್ತೆಯಾಯಿತು. ಇದೀಗ ಅದರೊಳಗಿದ್ದ ಎಲ್ಲಾ 8 ಮಂದಿಯ ಶವವೂ ಪತ್ತೆಯಾಗಿದೆ. ಆದರೆ ಶವಗಳು ಗುರುತು ಸಿಗುವ ಸ್ಥಿತಿಯಲ್ಲಿಲ್ಲ ಎಂದು ನೇಪಾಳ ಸೇನೆ ತಿಳಿಸಿದೆ.
ಇದೀಗ ಈ ಹೆಲಿಕಾಫ್ಟರ್ ಪತನಕ್ಕೆ ಕಾರಣವಾದ ಅಂಶವನ್ನು ಪತ್ತೆ ಹಚ್ಚಲು ನೇಪಾಳ ಮತ್ತು ಅಮೆರಿಕ ಸೇನೆ ತನಿಖೆ ಆರಂಭಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.