ಮಂಗಳೂರು : ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಬಳಿಕ ಬಹು ಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ಹಾಗೂ ಹಲ್ಲೆಗಳು ಸಾಮಾನ್ಯ ಸಂಗತಿಯಾಗಿರುವುದು ದುರಂತ. ರಾಜ್ಯಾದಂತ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಯಿಸುಕೊಂಡು ಸೈದ್ಧಾಂತಿಕ ಹಲ್ಲೆ ಹಾಗೂ ಹತ್ಯೆಗಳು ಪೈಪೋಟಿಯಲ್ಲಿ ಜರುಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇಂದು ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾದ ಉಪಾಧ್ಯಕ್ಷರಾದ ಎಸ್. ಹರೀಶ್ ಇವರನ್ನು ಬೆಂಗಳೂರಿನ ಆನೆಕಲ್ ತಾಲೂಕಿನಲ್ಲಿ ಆಮಾನುಷವಾಗಿ ಕೊಂದಿರುವುದು ಅತ್ಯಂತ ಅಕ್ಷಮ್ಯ. ಈ ಹಿಂದೆ ನಡೆದಿರುವ ಪ್ರಕರಣಗಳಲ್ಲಿ ಯಾವುದರಲ್ಲಿಯೂ ಕೂಡ ಪ್ರಾಮಾಣಿಕವಾಗಿ ತನಿಖೆ ನಡೆಯದೆ ಅಪರಾಧಿಗಳಿಗೆ ಶಿಕ್ಷೆಯಾಗದಿರುವುದು ಈ ರೀತಿಯ ಮತ್ತಷ್ಟು ಹತ್ಯೆಗಳಿಗೆ ಪ್ರಚೋದಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ತಾರತಮ್ಯವು ತಾರಕಕ್ಕೇರಿರುವುದು ದುರಂತ, ಕೆಲ ಕಾಣದ ಶಕ್ತಿಗಳು ಅಧಿಕಾರಿ ವರ್ಗವನ್ನು ತಮ್ಮ ರಾಜಕೀಯ ಶಕ್ತಿಯನ್ನು ಉಪಯೋಗಿಸಿ ದುರ್ಬಳಕೆ ಮಾಡುತ್ತಿರುವ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದೆ.
ಬಂಟ್ವಾಳ ತಾಲೂಕಿನ ಕರೋಪ್ಪಾಡಿ ಗ್ರಾಮದ ಪಂಚಾಯತ್ ಉಪಾಧ್ಯಕ್ಷರ ಹತ್ಯೆಯ ತನಿಖೆಯ ನೆಪ ಒಡ್ಡಿ ಅಮಾಯಕ ಹಿಂದುಗಳಿಗೆ ತೊಂದರೆ ಕೊಡುವ ನಿಟ್ಟಿನಲ್ಲಿ ಇಂದು ಇಲಾಖೆಗಳು ಕಾರ್ಯ ನಿರ್ವಹಿಸುತ್ತದೆ. ಅದೇ ರೀತಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಗ್ರಾಮದಲ್ಲಿ ಪ್ರಕರಣವನ್ನೇ ತಿರುಚಿ ಬಹು ಸಂಖ್ಯಾತರ ವಿರುದ್ದ ಎತ್ತಿ ಕಟ್ಟುವ ಪ್ರಯತ್ನವೂ ಭರದಿಂದ ಸಾಗಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲಾ ಪ್ರಕರಣಗಳ ಪ್ರಾಮಾಣಿಕವಾಗಬೇಕು ಹಾಗೂ ಜಿಲ್ಲೆಯ ಬಹುಸಂಖ್ಯಾತರ ಮೇಲೆ ನಡುವೆ ಜರಗುವ ಮಾನಸಿಕ ಹಾಗು ದೈಹಿಕ ಹಿಂಸೆಗೆ ಕಡಿವಾಣ ಬೀಳುವ ನಿಟ್ಟಿನಲ್ಲಿ ಸರಕಾರ ಹಾಗೂ ಇಲಾಖೆಗಳು ಕಾರ್ಯನಿರ್ವಹಿಸಬೇಕು.
ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೂರು ವರ್ಷದ ಸಾಧನೆಗಳನ್ನು ಜನರಿಗೆ ತಲುಪಿಸಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಕಮಲ ಅರಳಿಸಲು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಸಮಾವೇಶ ರಾಜ್ಯದ 33 ಕಡೆಗಳಲ್ಲಿ ನಡೆಯಲಿದೆ. ಮೋದಿ ಸರಕಾರದ ಮೂರು ವರ್ಷಗಳ ಈ ಸಂಭ್ರಮಾಚರಣೆಗೆ ಕೇಂದ್ರದ ಹಲವು ಸಚಿವರು, ದೇಶದ ಬೇರೆ ಬೇರೆ ರಾಜ್ಯಗಳಲ್ಲಿನ ಮುಖ್ಯ ಮಂತ್ರಿಗಳು ಹಾಗೂ ಪಕ್ಷದ ಮುಂತಾದ ಪ್ರಮುಖ ನಾಯಕರುಗಳು ಪಾಲ್ಗೊಳ್ಳಲ್ಲಿದ್ದಾರೆ.
ದ.ಕ ಜಿಲ್ಲೆಯಲ್ಲಿ ದಿನಾಂಕ 7-6-2017 ರಂದು ಮಂಗಳೂರಿನ ಪುರಭವನದಲ್ಲಿ ಪೂರ್ವಹ್ನ 11 ರಿಂದ ಜರಗುವ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಸಮಾವೇಶಕ್ಕೆ ಕೇಂದ್ರದ ಕಾನೂನು ಮತ್ತು ನ್ಯಾಯ, ಮಾಹಿತಿ ತಂತ್ರಜ್ಞಾನದ ರಾಜ್ಯ ಖಾತೆ ಸಚಿವರಾದ ಶ್ರೀ ಪಿ.ಪಿ. ಚೌದರಿಯವರು ಉದ್ಘಾಟಿಸಿ ಮುಖ್ಯ ಭಾಷಣ ಮಾಡಲಿರುವರು. ಈ ಸಮಾವೇಶಕ್ಕೆ ಜಿಲ್ಲೆಯ ಜನತೆ ಬೃಹತ್ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ದ.ಕನ್ನಡದ ಜನತೆಯಲ್ಲಿ ಬಿಜೆಪಿ ವಿನಂತಿಸುತ್ತದೆ ಎಂದು ದ.ಕ. ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.