ರಾತ್ರಿ ಹಗಲೆನ್ನದೆ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಅರ್ಪಣೆಯಾಗಿ ಲಕ್ನೋದ ವೃತ್ತಿಪರ ಫೋಟೋಗ್ರಾಫರ್ ಮಿಥಲೇಶ್ ಮೌರ್ಯ ಮೇ 23ರಂದು ಕನ್ಯಾಕುಮಾರಿಯಿಂದ ಲಡಾಖ್ಗೆ ಬೈಕ್ ಪ್ರಯಾಣವನ್ನು ಆರಂಭಿಸಿದ್ದಾರೆ. ಒಬ್ಬಂಟಿಯಾಗಿ ಪ್ರಯಾಣ ಆರಂಭಿಸಿದ ಅವರಿಗೆ ಇದೀಗ ಇತರ ಮೂರು ಮಂದಿ ಸಾಥ್ ಕೊಡುತ್ತಿದ್ದಾರೆ.
ತಮ್ಮ ರಾಯಲ್ ಎನ್ಫೀಲ್ಟ್ ಬೈಕ್ ಮೂಲಕ ಕನ್ಯಾಕುಮಾರಿಯಿಂದ ಲಡಾಖ್ಗೆ ಪ್ರಯಾಣ ಹೊರಟಿದ್ದ ಮಿಥಲೇಶ್ ಅವರಿಗೆ ಆಗ್ರಾ ತಲುಪುತ್ತಿದ್ದಂತೆ ಅಚ್ಚರಿ ಕಾದಿತ್ತು. ಅದೇನೆಂದರೆ ಅವರ ಫೇಸ್ಬುಕ್ ಸ್ನೇಹಿತರಾದ ನಾಗ್ಪುರದ ಚೇತನ್ ಪೊಪಟ್, ಇಂಧೋರ್ನ ಶುಭಂ ಮತ್ತು ಕೋಲ್ಕತ್ತಾದ ಪ್ರದೀಪ್ ದಾಸ್ ಅವರನ್ನು ಅಲ್ಲಿ ಸೇರಿಕೊಂಡರು.
ತಮ್ಮ 7 ಸಾವಿರ ಕಿಲೋಮೀಟರ್ ಉದ್ದದ ಬೈಕ್ ಸವಾರಿಯನ್ನು ಮಿಥಲೇಶ್ ಅವರು ದೇಶ ಸೇವೆಗೆ ಹಗಲಿರುಳು ದುಡಿಯುತ್ತಿರುವ ಯೋಧರಿಗೆ ಅರ್ಪಣೆ ಮಾಡಿದ್ದಾರೆ. ದಾರಿ ಮಧ್ಯೆ ಯಾರು ಸಿಗುತ್ತಾರೋ ಅವರನ್ನು ತಮ್ಮ ಡೈರಿಯಲ್ಲಿ ಯೋಧರ ಬಗ್ಗೆ ಬರೆಯುವಂತೆ ಇವರು ಕೇಳಿಕೊಳ್ಳುತ್ತಾರೆ. ವಿವಿಧ ಜನರು ವಿವಿಧ ಭಾಷೆಗಳಲ್ಲಿ ಬರೆದ ಭಾರತೀಯ ಸೇನೆ ಬಗೆಗಿನ ಹಲವಾರು ಕಾಮೆಂಟ್ಗಳು ಇವರ ಡೈರಿಯಲ್ಲಿವೆ.
‘ಕಾರ್ಗಿಲ್ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ಮನೋಜ್ ಪಾಂಡೆ ನನ್ನ ನೆಲದವರು. ಹೀಗಾಗೀ ಕಾರ್ಗಿಲ್ ಸೆಕ್ಟರ್ನಲ್ಲಿನ ಮ್ಯೂಸಿಯಂಗೆ ತೆರಳಿ ಹುತಾತ್ಮ ಯೋಧರ ಬಗ್ಗೆ ನಾನು ತಿಳಿದುಕೊಳ್ಳುವೆ’ ಎಂದು ಮಿಥಿಲೇಶ್ ಹೇಳುತ್ತಾರೆ.
ಯೋಧರ ಗೌರವಾರ್ಥ ಅವರು ಮಾಡುತ್ತಿರುವ ಈ ಕಾರ್ಯಕ್ಕೆ ಜನತೆ ಇನ್ನಿಲ್ಲದಂತೆ ಬೆಂಬಲ ಕೊಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.