ಪಿಎಚ್ಡಿ ಪದವಿಯನ್ನು ಪಡೆಯಬೇಕು, ಭವಿಷ್ಯದಲ್ಲಿ ವಿಜ್ಞಾನಿಯಾಗಬೇಕು ಎಂಬ ಮಹದಾಸೆ ಹೊತ್ತಿರುವ ಮಹಾರಾಷ್ಟ್ರ ಮೂಲದ ಸ್ನೇಹ ಲಿಂಬ್ಗಾವ್ಕರ್ ಹಗಲಲ್ಲಿ ವಿದ್ಯಾಭ್ಯಾಸ ಮಾಡಿ ರಾತ್ರಿ ಆಲೂ ಪರಾಟ ಮಾರಾಟ ಮಾಡುವ ಕಾಯಕ ಮಾಡುತ್ತಾರೆ.
ಕೇರಳದ ಕರಿಯವಟ್ಟಂನಲ್ಲಿನ ರಸ್ತೆ ಬದಿಯಲ್ಲಿರುವ ಹಲವಾರು ರಸ್ತೆ ಬದಿ ಅಂಗಡಿಗಳಲ್ಲಿ ಸ್ನೇಹ ಮತ್ತು ಅವರ ಪತಿ ಪ್ರೇಮ್ಸಂಕರ್ ಮಂಡಲ್ ಅವರ ಥರ್ಪಲ್ ಹಾಕಿದ ಆಲೂ ಪರಾಟ ಅಂಗಡಿಯೂ ಒಂದು. ಆದರೆ ಈ ಅಂಗಡಿಯನ್ನು ಭಿನ್ನವಾಗಿಸಿದ್ದು ಇಲ್ಲಿ ದುಡಿಯುವ ದಂಪತಿಗಳು.
ಸ್ನೇಹ ಪಿಎಚ್ಡಿ ಕನಸು ಹೊತ್ತು ಹಗಲು ವಿದ್ಯಾಭ್ಯಾಸ ಮಾಡಿ, ರಾತ್ರಿ ಇಲ್ಲಿ ಆಲೂ ಪರಾಟ ಮಾರಿದರೆ, ಅವರ ಪತಿ ಪ್ರೇಮ್ಸಂಕರ್ ತಮ್ಮ ಪತ್ನಿಯನ್ನು ವಿಜ್ಞಾನಿ ಮಾಡಬೇಕು ಎಂಬ ಎಕೈಕ ಉದ್ದೇಶಯಿಟ್ಟುಕೊಂಡ ಹಗಲಿರುಳೆನ್ನದೆ ಇಲ್ಲಿ ದುಡಿಯುತ್ತಾರೆ.
ಪೋಷಕರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡ ಈ ದಂಪತಿ ಒಬ್ಬರಿಗಾಗಿ ಒಬ್ಬರು ಎಂಬಂತೆ ಬದುಕುತ್ತಿದ್ದಾರೆ. ಪತ್ನಿಗೆ ಕೇರಳ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡಲು ಅವಕಾಶ ಸಿಕ್ಕಾಗ ದೆಹಲಿಯ ಸಿಎಜಿಯಲ್ಲಿದ್ದ ಕೆಲಸವನ್ನು ತೊರೆದು ಪತ್ನಿಯೊಂದಿಗೆ ಕೇರಳಕ್ಕೆ ಬಂದವರು ಪ್ರೇಮ್ಸಂಕರ್.
ಬದುಕಿನ ನಿರ್ವಹಣೆಗಾಗಿ ಪ್ರೇಮ್ಸಂಕರ್ ಆಲೂ ಪರಾಟ ಅಂಗಡಿಯಿಟ್ಟಾಗ ಅದಕ್ಕೆ ಬೆನ್ನೆಲುಬಾಗಿ ನಿಂತ ಸ್ನೇಹ ರಾತ್ರಿ ಬಂದು ಪತಿಗೆ ಸಹಾಯ ಮಾಡುತ್ತಾರೆ. ಗಳಿಸಿದ ಹಣವನ್ನು ಸ್ಮೇಹ ಅವರ ವಿದ್ಯಾಭ್ಯಾಸ ಮತ್ತು ಜೀವನ ನಿರ್ವಹಣೆಗೆ ವ್ಯಯಿಸುತ್ತಾರೆ.
ಆಲೂ ಪರಾಟ ಮಾರಾಟ ಮಾಡಿಯಾದರೂ ವಿಜ್ಞಾನಿಯಾಗಬೇಕೆಂಬ ಪಣ ತೊಟ್ಟಿರುವ ಸ್ನೇಹ ಮತ್ತು ಅದಕ್ಕೆ ಬೆನೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.