ಕಾನ್ಪುರ : ತನ್ನ 120 ವರ್ಷದ ಅತ್ತೆಗಾಗಿ 90 ವರ್ಷದ ಸೊಸೆಯೊಬ್ಬರು ತನ್ನ ಬಳಿಯಿದ್ದ 5 ಆಡುಗಳನ್ನು ಮಾರಿ ಶೌಚಾಲಯವನ್ನು ನಿರ್ಮಿಸಿದ ಪ್ರೇರಣಾದಾಯಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಇತರರು ವಿಶ್ವ ತಾಯಂದಿರ ದಿನವನ್ನು ಹೂವಿನ ಬೊಕ್ಕೆ, ಕೇಕ್ಗಳಂತಹ ಇತ್ಯಾದಿ ಗಿಫ್ಟ್ಗಳನ್ನು ತಾಯಿಗೆ ನೀಡುವ ಮೂಲಕ ಆಚರಿಸಿದರೆ, ಇಲ್ಲೊಬ್ಬಳು ಮಹಿಳೆ ತನ್ನ ತಾಯಿಯಂತಿರುವ ಅತ್ತೆಗಾಗಿ ಶೌಚಾಲಯದಂತಹ ಅತಿ ಪ್ರಮುಖ ಉಡುಗೊರೆಯನ್ನು ನೀಡಿದ್ದಾರೆ.
ಕಾನ್ಪುರದ ದೇಹತ್ನ ಚಂದನಾ ಇದೀಗ ಕೇಂದ್ರ ಸರ್ಕಾರದ ಗ್ರಾಮೀಣ ಪ್ರದೇಶದ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಂತೆ ಕಂಡುಬರುತ್ತಿದ್ದಾರೆ.
ಅವರು ತನ್ನ ಬಳಿ ಇದ್ದ 5 ಆಡುಗಳನ್ನು ಮಾರಿ, ಅದರಿಂದ ಬಂದ ಹಣದಿಂದ ಒಂದು ಶೌಚಾಲಯವನ್ನು ನಿರ್ಮಿಸಿದ್ದಾರೆ. ತನ್ನ ಹಿರಿ ವಯಸ್ಸಿನ ಅತ್ತೆ ಬಯಲು ಶೌಚಕ್ಕೆಂದು ಹೋಗಿ ಬಿದ್ದ ಪರಿಣಾಮ ಅವರ ಕಾಲು ಗಾಯಗೊಂಡಿತ್ತು. ಆಗಲೇ ಚಂದನಾ ಅವರು ಏನೇ ಆಗಲಿ ಶೌಚಾಲಯವನ್ನು ನಿರ್ಮಿಸಲೇಬೇಕೆಂದು ಪಣ ತೊಟ್ಟರು.
ಚಂದನಾ ಅವರ ಮಗ ರಾಮ್ಪ್ರಕಾಶ್ ಗ್ರಾಮದ ಸರ್ಪಂಚ್ ಮತ್ತು ಜಿಲ್ಲಾ ಆಡಳಿತಗಳಿಗೆ ಶೌಚಾಲಯವನ್ನು ನಿರ್ಮಿಸಲು ಸಹಾಯ ಮಾಡುವಂತೆ ಕೋರಿಕೊಂಡರೂ ಅವರಿಂದ ಯಾವುದೇ ಸಹಾಯಗಳು ಬರಲಿಲ್ಲ. ಹೀಗಾಗಿ ಚಂದನಾ ಅವರು ತಮ್ಮ ಹೊಟ್ಟೆಪಾಡಿಗಾಗಿ ಸಾಕುತ್ತಿದ್ದ 5 ಆಡುಗಳನ್ನೇ ಮಾರಿ ತನ್ನ ಅತ್ತೆಗಾಗಿ ಶೌಚಾಲಯವನ್ನು ನಿರ್ಮಿಸಿಕೊಟ್ಟಿದ್ದಾರೆ.
ಇದೀಗ ಜಿಲ್ಲಾಡಳಿತದ ಅಧಿಕಾರಿಗಳು ಚಂದನಾ ಅವರ ಕಾರ್ಯವನ್ನು ಶ್ಲಾಘಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.