ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎ೦ದಿಗೂ ತನ್ನ ಧರ್ಮ ಬಿಟ್ಟು ಇನ್ನೂ೦ದಕ್ಕೆ ಶರಣಾಗಲ್ಲ.
ತೇಜಪುರುಷ ….ಮೃತ್ಯುಂಜಯ….. ಧರ್ಮವೀರ ಸಂಭಾಜಿ ! ಇತಿಹಾಸ ಪುಟದಲ್ಲಿ ಅಚ್ಚಳಿಯದ ಹೆಸರು “ವೀರ ಸಾ೦ಭಾಜಿ”
ಇಡೀ ಮಹಾರಾಷ್ಟ್ರದಲ್ಲಿ ಬರುವ ಎರಡು ಪ್ರಮುಖ ಘೋಷಣೆಗಳು – ಧರ್ಮ(ಮರು) ಸ್ಥಾಪಕ “ಶಿವಾಜಿ” ಧರ್ಮ ರಕ್ಷಕ “ಸಾ೦ಭಾಜಿ” “ಸೋಲನ್ನು ಅರಿಯದ ಸಾಂಭಾಜೀ”.
ಶಿವಾಜಿ ಮಹಾರಾಜರ ನ೦ತರ ಹಿ೦ದು ಧರ್ಮದ ಕೀರ್ತಿ ಪತಾಕೆ ಹಾರಿಸಿದ ಧರ್ಮರಕ್ಷಕ
ಶಿವಾಜಿ ಮಹಾರಾಜರು ಮತ್ತು ಸಾಯಿಭಾಯಿ ದ೦ಪತಿಯ ಮಗನಾಗಿ 14ನೇ ಮೇ 1657ರಲ್ಲಿ ಪುಣೆಯ ಪುರ೦ಧರಘಡನಲ್ಲಿ ಜನ್ಮತಾಳಿದ “ಸಾ೦ಭಾಜಿ” ಮಹಾರಾಜರಿಗೆ ತ೦ದೆಯ ಧರ್ಮನಿಷ್ಟೆ, ಗುರುಭಕ್ತಿಯೇ ಆದರ್ಶ ವೀರ ಪರಾಕ್ರಮಿಯಾದ ತ೦ದೆಯ ಜೊತೆ ಬೆಳೆದ ಸಾ೦ಭಾಜಿ ಮಹಾರಾಜರ ಧೈರ್ಯ ತಿಳಿಯೋದು ಇ೦ತಹ ಸಮಯದಲ್ಲಿಯೇ.
ಒಮ್ಮೆ ಶಿವಾಜಿ ಮಹಾರಾಜರು ಮತ್ತು ಚಿಕ್ಕ ಬಾಲಕ ಸಾ೦ಭಾಜಿ ಮಹಾರಾಜರು ಔರ೦ಗ್ ಜೇಬ್ನ ಆಸ್ಥಾನದಲ್ಲಿ ನಿ೦ತಿರೋ ಸಮಯ ಔರ೦ಗ್ ಜೇಬ್ ನ ಆಗಮನವಾಯಿತು. ಎಲ್ಲರೂ ತಲೆ ತಗ್ಗಿಸಿ ವ೦ದಿಸೋದು ಅಲ್ಲಿಯ ಸ೦ಪ್ರದಾಯ. ಇದನ್ನು ತಿರಸ್ಕರಿಸಿದ ಶಿವಾಜಿ ಮಹಾರಾಜರು ಮತ್ತು ಪುತ್ರ ಸಾ೦ಭಾಜಿ ಎದೆಯತ್ತಿ ನಿ೦ತರು. ಇದನ್ನು ವಿರೋಧಿಸಿದ ಆಸ್ಥಾನದ ಮ೦ತ್ರಿ “ರಾಜನಿಗೆ ವ೦ದಿಸೋದು ನಿಮಗೆ ಗೊತ್ತಿಲ್ಲವೇ” ಎ೦ದು ಪ್ರಶ್ನಿಸಿದ ಅದಕ್ಕೆ ಶಿವಾಜಿ ಮಹಾರಾಜರ ಉತ್ತರ ಅದ್ಭುತ. ನಮಗೆ ಶಿವಾಜಿ ಮಹಾರಾಜರು ಇಷ್ಟ ಆಗೋದು ಇದೇ ಕಾರಣಕ್ಕಾಗಿಯೇ. “ರಾಜನಿದ್ದರೆ ಅದು ನಿಮಗೆ, ನನಗಲ್ಲ ನಾನು ಕೂಡ ನಿಮ್ಮ ರಾಜನ ತರ ಸ್ವತಂತ್ರ ರಾಜನೇ” ಎ೦ದರು.
ಆಗ ಅಲ್ಲಿನ ಸ೦ದರ್ಭ ವಾಗ್ವಾದಕ್ಕೆ ಹೋಗಿ ಶಿವಾಜಿ ಮತ್ತು ಬಾಲಕ ಸಾ೦ಭಾಜಿಯ ಗ್ರಹಬ೦ಧನವಾಯಿತು.ಇದನ್ನು ನೋಡಿದ ಅಲ್ಲಿನ ಸೇವಕರು, ಸ೦ಭಾಜಿಗೆ “ಮಗು ಭಯವಾಗುತ್ತಿದೆಯಾ?” ಎ೦ದು ಕೇಳಿದ್ದಕ್ಕೆ “ಶಿವಾಜಿ ಮಹಾರಾಜನ ಮಗ ನಾನು. ನನಗೆ ಭಯವೇ???” ಅನ್ನೋ ಉತ್ತರ ಕೊಟ್ಟ ಧೀರ ಸಾ೦ಭಾಜಿ.
ಸಾ೦ಭಾಜಿ ಮಹಾರಾಜರು ವಯಸ್ಕರಾದಾಗ ಅವರ ಎತ್ತರ 7.5″, ತೂಕ 170 kg, ಎದೆಯ ಸುತ್ತಳತೆ 75, ಅವರು ಯದ್ದದಲ್ಲಿ ಉಪಯೋಗಿಸಿದ ಖಡ್ಗದ ಎತ್ತರ 4feet, ಆ ಖಡ್ಗದ ತೂಕ ಬರೊಬ್ಬರಿ 65kg, ಅವರ ಮಾಡುತ್ತಿದ್ದ ಊಟದ ಪದ್ಧತಿ 12 ರೊಟ್ಟಿ 2 ಲೀಟರ್ ಹಾಲು.
ಇವರ ಸೈನ್ಯದಲ್ಲಿದ್ದ 500 ಜನರ ಸೈನ್ಯ ಎದುರಾಳಿಯ 1000 ಜನರನ್ನು ಕೊಲ್ಲುವ ಶಕ್ತಿ ಹೊ೦ದಿತ್ತು. ಇವರು ಹೋರಾಡಿದ 128 ಯುದ್ಧಗಳಲ್ಲಿ ಕನಿಷ್ಠ ಒ೦ದು ಯುದ್ಧವನ್ನು ಸೋಲದೇ ಅಜೇಯನಾಗಿ ತ೦ದೆಯ ಮತ್ತು ಹಿ೦ದು ಧರ್ಮದ ಕೀರ್ತಿಯನ್ನು ಉತ್ತುಂಗಕ್ಕೆ ಹಾರಿಸಿದ ರೂವಾರಿ.
“ಧರ್ಮರಕ್ಷಕ ಸಾ೦ಭಾಜಿ ಮಹಾರಾಜರು”
ಸಾ೦ಭಾಜಿ ಮಹಾರಾಜರು ಕಾಡಿನಲ್ಲಿ ಎದುರಾದ ವ್ಯಾಘ್ರ(ಹುಲಿ)ನ ಬಾಯಿಯನ್ನು ಸೀಳಿದ ಪರಾಕ್ರಮಿ ಸೋಲನ್ನರಿಯದ ಸರದಾರ. ನಿಜಾಮನ ಆಡಳಿತವಿದ್ದಾಗ ದೆಹಲಿ ಮೇಲೆ ಮೊದಲು “ಭಗವಾ ಧ್ವಜ” ಹಾರಿಸಿದ ವೀರ ಕೇಸರಿ. ಇವರ ಧರ್ಮನಿಷ್ಟೆಗೆ ಇವರ ತ೦ದೆಯೆ ಭದ್ರ ಬುನಾದಿ .
ಧರ್ಮಕ್ಕಾಗಿ ಮೃತ್ಯುವನ್ನೇ ಆಲಂಗಿಸಿದ ಧರ್ಮವೀರ ಛತ್ರಪತಿ ಸಂಭಾಜಿ !
ಛತ್ರಪತಿ ಶಿವಾಜಿ ಮಹಾರಾಜರ ಮೃತ್ಯುವಿನ ನಂತರ ಮಹಾರಾಷ್ಟ್ರವನ್ನು ಗೆಲ್ಲಲು ಬಂದಿದ್ದ ಔರಂಗಜೇಬನೊಂದಿಗೆ ಸಂಭಾಜಿ ಮಹಾರಾಜರು ಒಂಬತ್ತು ವರ್ಷಗಳ ಕಾಲ ಹೋರಾಡಿ ಹಿಂದವೀ ಸ್ವರಾಜ್ಯವನ್ನು ಕೇವಲ ಸುರಕ್ಷಿತವಾಗಿಟ್ಟರಲ್ಲದೇ ಅದನ್ನು ದ್ವಿಗುಣವಾಗಿ ವಿಸ್ತರಿಸಿದರು.
ಔರಂಗಜೇಬ ಬಾದಶಾಹನ ತನ್ನದೇ ಆದ ಒಂದು ಡೇರೆ ತುಳಾಪುರದಲ್ಲಿ ವಿಶಾಲವಾದ ಒಂದು ಛಾವಣಿಯಲ್ಲಿತ್ತು. ಅಲ್ಲಿಂದ ಸಮೀಪದಲ್ಲಿಯೇ ಇರುವ ಸಿಕಂದರಖಾನನ ಡೇರೆಗೆ ಹೊಂದಿಕೊಂಡಿರುವ ಕಾರಾಗೃಹದಲ್ಲಿ ಸಂಭಾಜಿ ಮಹಾರಾಜ ಮತ್ತು ಕವಿ ಕಲಶ ಇವರನ್ನು ಬಂಧಿಸಲಾಗಿತ್ತು. ೨೨ ದಿನಗಳವರೆಗೆ ಅವರನ್ನು ವಿವಿಧ ರೀತಿಯಲ್ಲಿ ಹಿಂಸಿಸಲಾಯಿತು. ಕೊನೆಗೆ ಅರೆಜೀವವಿರುವ ಸ್ಥಿತಿಯಲ್ಲಿ ಅವರ ದೇಹವನ್ನು ವಡೂ ಎಂಬ ಹಳ್ಳಿಯ ಕಾಡಿಗೆ ತರಲಾಯಿತು. ಅಲ್ಲಿ ಕವಿ ಕಲಶನ ಶಿರಚ್ಛೇದ ಮಾಡಲಾಯಿತು ಹಾಗೂ ಸಂಭಾಜಿ ಮಹಾರಾಜರನ್ನು ಭೂಮಿಯ ಮೇಲೆ ಕವುಚಿ ಮಲಗಿಸಿ ಕೊಡಲಿಯಿಂದ ಕಾಲಿನಿಂದ ಹಿಡಿದು ಎಲ್ಲ ಅಂಗಗಳನ್ನು ತುಂಡರಿಸಲಾಯಿತು.
ಗೃಹ ವಂಚಕರಿಂದಾಗಿ ಬಂಧಿಸಲ್ಪಟ್ಟ ನಂತರ ಔರಂಗಜೇಬನು ನೀಡಿದ ಕ್ರೂರ ಯಾತನೆಯನ್ನು ಸಹಿಸಿಕೊಂಡು ಮಹಾರಾಜರು ಮರಣ ಹೊಂದಿದರು; ಆದರೆ ಮತಾಂತರವಾಗಲಿಲ್ಲ.
ಸಾವಿರ ಬಾರಿ ಹುಟ್ಟುತ್ತೇನೆ ಸಾವಿರ ಬಾರಿ ಸಾಯುತ್ತೇನೆ ಆದರೆ ಹಿಂದು ಧರ್ಮವನ್ನು ಎಂದಿಗೂ ಬಿಡುವುದಿಲ್ಲ.
“ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎ೦ದಿಗೂ ತನ್ನ ಧರ್ಮ ಬಿಟ್ಟು ಇನ್ನೂ೦ದಕ್ಕೆ ಶರಣಾಗಲ್ಲ ನಿನ್ನ ರಾಜ್ಯ ಬಿಟ್ಟು ಕೊಟ್ಟರು ನಾನು ನಿನ್ನ ಧರ್ಮಕ್ಕೆ ಬರಲ್ಲ”
ಜೀವ ಸವೆಸಿದ ಹೊರತು ಧರ್ಮ ಬಿಡಲಿಲ್ಲ 11ನೇ ಮಾರ್ಚ್ 1689 ರಲ್ಲಿ ತಮ್ಮ ಕೊನೆ ಉಸಿರೆಳೆದ ಆಗಿನ್ನು ಸಾ೦ಭಾಜಿ ಮಹಾರಾಜರ ವಯಸ್ಸು ಬರೀ 31 ವರ್ಷ.
ಅವರ ಕಠಿಣ ದಿನಗಳನ್ನು ಮಹಾರಾಷ್ಟ್ರದ ಜನತೆ ಇನ್ನೂ ಮರೆಯದೆ ಆ ಒ೦ದು ತಿ೦ಗಳ ಮಟ್ಟಿಗೆ ಆಹಾರ ಮುಟ್ಟದೆ, ಕಾಲಿಗೆ ಚಪ್ಪಲಿ ಧರಿಸದೇ ಕಠಿಣ ವ್ರತಗೈಯುತ್ತಾರೆ.
ಧರ್ಮಕ್ಕಾಗಿ ಬಲಿದಾನ ಮಾಡಿದ ಈ ರಾಜನು ಇತಿಹಾಸದಲ್ಲಿ ಅಮರನಾದನು.
ನಮ್ಮ ಪೂರ್ವಜರ ಪರಾಕ್ರಮ, ತ್ಯಾಗ ಬಲಿದಾನಗಳನ್ನ ನೆನೆಯೋಣ, ಸ್ಮರಿಸೋಣ. ಅವರಂತೆ ಧರ್ಮರಕ್ಷಣೆಗೆ ಕಟಿಬಧ್ದರಾಗೋಣ.
ಇ೦ತಹ ಅಪ್ರತಿಮ ನಾಯಕ, ವೀರ ಕೇಸರಿಗೆ ನನ್ನ ಅನಂತ ಕೋಟಿ ನಮನ.
ಜೈ ಹಿಂದವಿ ಸ್ವರಾಜ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.