ನವದೆಹಲಿ: ಪಾಕಿಸ್ಥಾನದ ವಿವಿಧ ಏಜೆನ್ಸಿಗಳ ಬೇಜವಾಬ್ದಾರಿತನ ಮತ್ತು ಅಸಮರ್ಥತೆಯೇ 26/11 ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಝಾಕಿಉರ್ ರೆಹಮಾನ್ ಲಖ್ವಿಯ ಬಿಡುಗಡೆಗೆ ಕಾರಣವಾಯಿತು ಎಂದು ಕೇಂದ್ರ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹಖಾತೆ ರಾಜ್ಯಸಚಿವ ಕಿರಣ್ ರಿಜ್ಜು ‘ಲಖ್ವಿ ವಿರುದ್ಧ ಎಲ್ಲಾ ದಾಖಲೆಗಳನ್ನು, ಸಾಕ್ಷಿಗಳನ್ನು ನಾವು ಪಾಕ್ಗೆ ನೀಡಿದ್ದೇವೆ, ಆದರೆ ಅಲ್ಲಿನ ಏಜೆನ್ಸಿಗಳು ಈ ಸಾಕ್ಷಿಗಳನ್ನು ಸಮರ್ಥವಾಗಿ ನ್ಯಾಯಾಲಯದ ಮುಂದೆ ಮಂಡನೆಗೊಳಿಸಿಲ್ಲ, ಇದರಿಂದ ಲಖ್ವಿ ರಿಲೀಸ್ ಆದ. ಪಾಕ್ ಅತಿ ಬೇಜವಾಬ್ದಾರಿತನ ಮತ್ತು ಅಸಮರ್ಥ ರೀತಿಯಲ್ಲಿ ಈ ಪ್ರಕರಣವನ್ನು ನಿಭಾಯಿಸಿದೆ’ ಎಂದು ಆರೋಪಿಸಿದ್ದಾರೆ.
ಅಲ್ಲದೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ಥಾನದಲ್ಲೇ ಇದ್ದಾನೆ, ಆತನನ್ನು ಭಾರತಕ್ಕೆ ಕರೆ ತಂದು ನ್ಯಾಯಾಂಗದ ಮುಂದೆ ಹಾಜರುಪಡಿಸುವುದಕ್ಕೆ ನಾವು ಕಟಿಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.