ಮೂಡುಬಿದಿರೆ: ಭವಿಷ್ಯದ ಉದ್ಯಮಿಗಳನ್ನು ರೂಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಎಂಟರ್ಪ್ರೆನುರ್ಶಿಪ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮಹತ್ವದ ಒಪ್ಪಂದ ಮಾಡಿಕೊಂಡಿವೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಮೋಹನ್ ಆಳ್ವ ಹಾಗೂ ಇಡಿಐಐ ದಕ್ಷಿಣ ರಾಜ್ಯಗಳ ಪ್ರಾಂತೀಯ ಮುಖ್ಯಸ್ಥ ರಮಣ್ ಗುಜ್ರಾಲ್ ಸಹಿ ಹಾಕಿದರು. ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಯೋಜನೆಯ ಸಂಯೋಜಕರಾದ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ.ದತ್ತಾತ್ರೇಯ, ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಯೋಗೀಶ್ ರಾವ್ ಉಪಸ್ಥಿತರಿದ್ದರು.
ಇಂದಿನ ಯುವ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಮಹತ್ವ ಮತ್ತು ಅಗತ್ಯತೆಯನ್ನು ತಿಳಿಸುವುದು. ಉದ್ದಿಮೆಯನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡುವುದು. ಹೊಸ ಆವಿಷ್ಕಾರಗಳನ್ನೊಳಗೊಂಡ ನವೀನ ರೀತಿಯ ಉದ್ದಿಮೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವುದು. ಉದ್ದಿಮೆಯಲ್ಲಿ ಯಶಸ್ಸುಗಳಿಸಲು ಬೇಕಾಗುವ ಸಾಮರ್ಥ್ಯಗಳ ಬಗ್ಗೆ ತಜ್ಞರ ಮೂಲಕ ತರಬೇತಿ ನೀಡುವುದು. ಉದ್ಯಮವನ್ನು ಪ್ರಾರಂಭಿಸಲು ಸರ್ಕಾರಗಳು, ಬ್ಯಾಂಕ್ಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವುದು. ವಿದ್ಯಾರ್ಥಿಗಳು ಸ್ವಂತ ಉದ್ದಿಮೆ ಪ್ರಾರಂಬಿಸುವುದಕ್ಕೆ ಮೊದಲು ವಿವಿಧ ಕೈಗಾರಿಕೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡುವುದು. ಮುಖ್ಯವಾಗಿ ಎಂಟರ್ಪ್ರೆನುರ್ಶಿಪ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಆಳ್ವಾಸ್ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಕೋರ್ಸ್ ಮುಖಾಂತರ ಅಗತ್ಯ ಜ್ಞಾನವನ್ನು ಒದಗಿಸಿ ಭವಿಷ್ಯದ ಉದ್ಯಮಿಗಳನ್ನು ಸಜ್ಜುಗೊಳಿಸುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.