ಕೇರಳದ ಕುಟ್ಟೆಂಪೆರೂರ್ ನದಿ ಪಂಪಾ ಮತ್ತು ಅಚಾಂಕೋವಿಲ್ ನದಿಯ ಉಪನದಿ. ಸಂಪೂರ್ಣವಾಗಿ ಮಲಿನಗೊಂಡು, ಕಳೆ ತುಂಬಿಕೊಂಡು 10 ವರ್ಷಗಳ ಕಾಲ ಬಳಕೆಯಾಗದೆ ನನೆಗುದಿಗೆ ಬಿದ್ದಿದ್ದ ಈ ನದಿ ಇದೀಗ ಮತ್ತೆ ಜೀವ ಪಡೆದುಕೊಂಡಿದೆ, ಸುತ್ತಮುತ್ತಲ ಪ್ರದೇಶಗಳಿಗೆ ನೀರುಣಿಸುತ್ತಿದೆ.
ಕುಟ್ಟೆಂಪೆರೂರ್ ನದಿ ಮತ್ತೆ ಪುನರುಜ್ಜೀವನಗೊಳ್ಳಲು ಕಾರಣ ಅಲಪ್ಪುಝ ಜಿಲ್ಲೆಯ ಬುದನೂರ್ ಗ್ರಾಮ ಪಂಚಾಯತ್. 700 ಸ್ಥಳಿಯ ಮಹಿಳೆ, ಪುರುಷರನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೇಮಿಸಿಕೊಂಡ ಈ ಪಂಚಾಯತ್ ನದಿಯ ಪುನರುಜ್ಜೀವನ ಕಾರ್ಯವನ್ನು 70 ದಿನಗಳಲ್ಲಿ ಸಂಪೂರ್ಣಗೊಳಿಸಿದೆ.
ಒಂದು ಕಾಲದಲ್ಲಿ 12 ಕಿಲೋ ಮೀಟರ್ ಉದ್ದ, 100 ಫೀಟ್ ಅಗಲ ಮತ್ತು 6-20ಫೀಟ್ ಆಳ ಇದ್ದ ಈ ನದಿ 2005ರಲ್ಲಿ ಅಕ್ರಮ ಮರಳುಗಾರಿಕೆ, ಕೊಳಚೆ ಹಾಕುವಿಕೆ, ಕಳೆಗಳ ತೀವ್ರ ಪಸರಿಸುವಿಕೆಯ ಕಾರಣದಿಂದಾಗಿ 10-15 ಮೀಟರ್ ಉದ್ದಕ್ಕೆ ಕಡಿತಗೊಂಡಿತ್ತು.
ಅದರ ಸುತ್ತಮುತ್ತಲ ಪ್ರದೇಶದಲ್ಲಿ ಕಾಣಿಸಿಕೊಂಡ ತೀವ್ರ ಬರ ಮತ್ತೆ ಈ ನದಿಯ ಪುನರುಜ್ಜೀವನಕ್ಕೆ ಕಾರಣವಾಗಿದೆ. ಒಂದು ಕಾಲದಲ್ಲಿ ಇದೇ ನದಿ ಆ ಪ್ರದೇಶದ ನೀರಿನ ಮೂಲವಾಗಿತ್ತು. ಕೃಷಿಗೆ, ಜಾನುವಾರುಗಳಿಗೆ ಬಳಕೆಯಾಗುತ್ತಿತ್ತು. ಆದರೆ ನದಿ ತನ್ನ ತನವನ್ನು ಕಳೆದುಕೊಂಡ ಬಳಿಕ ಅಲ್ಲಿನ ಜನರ ನೀರಿನ ಭವನೆ ಏರತೊಡಗಿತು.
ಇದೀಗ ಪಂಚಾಯತ್ ಕೆರೆಯ ಕಳೆ ತೆಗೆದು, ಕಸಕಡ್ಡಿಗಳನ್ನು ತೆಗೆದು ಅದನ್ನು ಸ್ವಚ್ಛಗೊಳಿಸಿ ಸಂಪೂರ್ಣವಾಗಿ ಅದನ್ನು ಅದರ ಹಿಂದಿನ ರೂಪಕ್ಕೆ ಕೊಂಡೊಯ್ದಿದೆ. ಇದಕ್ಕಾಗಿ ಎರಡುವರೆ ತಿಂಗಳುಗಳ ಕಾಲ ನಡೆದಿದೆ. ಅಲ್ಲದೇ ಅದನ್ನು ಭವಿಷ್ಯದಲ್ಲೂ ಸಂರಕ್ಷಿಸುವ ಸಲುವಾಗಿ ಮಹತ್ವದ ಯೋಜನೆಗಳನ್ನು ಪಂಚಾಯತ್ ಹಾಕಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.