ಬೆಂಗಳೂರು : ತೀವ್ರವಾದ ಬರಗಾಲ ಹಾಗೂ ಅರಣ್ಯದಲ್ಲಿ ದೊಡ್ಡಿ ಹಾಕಲು ಬಿಡದ ಕಾರಣ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಹಸುಗಳು ಮೇವಿಲ್ಲದೆ ಸಾಯುತ್ತಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಮೇವು ಪೂರೈಕೆಯ ಘೋಷಣೆ ಮಾಡಿದ್ದು, ಈಗಾಗಲೇ 550ಟನ್ ಮೇವು ಪೂರೈಕೆಯಾಗಿದೆ.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕೌದಳ್ಳಿ, ಎರಂಬಾಡಿ, ಕೆವಿ ಎಂ ದೊಡ್ಡಿ, ಎಂ ಟಿ ದೊಡ್ಡಿ, ಪಚ್ಚೆದೊಡ್ಡಿ, ಮೀಣ್ಯಂ, ಗುಂಡಾಪುರ, ಚೆನ್ನೂರು, ಚೆಂಗಡಿ, ತೋಕರೆ, ದೊಡ್ಡಾಣಿ, ಪುದುನಗರ, ನಾಲ್ರೋಡ್ ಸೇರಿ 13 ಕಡೆಯಲ್ಲಿ ಮೇವು ವಿತರಣಾ ಕೇಂದ್ರಗಳನ್ನು ವಿವಿಧ ಸ್ಥರದಲ್ಲಿ ನಡೆಸಲಾಗುತ್ತಿದೆ.
ಎ.3 ರಿಂದ ಎ.10 ರವರೆಗೆ ಎರಂಬಾಡಿ ಒಂದು ಕೇಂದ್ರದಲ್ಲಿ ಮೇವು ವಿತರಣೆ ಮಾಡಿದ್ದು, ಆ ಬಳಿಕ ನಿತ್ಯ ಮೂರಕ್ಕೂ ಅಧಿಕ ಕೇಂದ್ರದಲ್ಲಿ ವಿವಿಧ ರೀತಿಯ ಮೇವನ್ನು ವಿತರಿಸಲಾಗಿದೆ. ಎ. 22 ರವರೆಗೆ 461.87ಟನ್ ಜೋಳ, 138.70ಟನ್ ಕಬ್ಬಿನ ದಂಡು, 14.25ಟನ್ ಹಾಳೆ ಸೇರಿ 614.82ಟನ್ ಮೇವು ವಿತರಣೆಯನ್ನು ಮಾಡಲಾಗಿದೆ.
ನಿತ್ಯವೂ ವಿತರಣೆ ಕಾರ್ಯ ನಡೆಯುತ್ತಿದ್ದು, ಬೇರೆ ಬೇರೆ ಜಿಲ್ಲೆಗಳ ಕಾರ್ಯಕರ್ತರು ತಂಡೋಪ ತಂಡವಾಗಿ ಆಗಮಿಸಿ ತಮ್ಮ ಸೇವೆಯನ್ನು ಸಲ್ಲಿಸುತಿದ್ದಾರೆ. ದೇಸೀ ಗೋವುಗಳ ರಕ್ಷಣೆಗಾಗಿ 1 ಸಾವಿರ ಟನ್ ಮೇವು ವಿತರಿಸಬೇಕೆಂಬ ಶ್ರೀಗಳವರ ಕಲ್ಪನೆ ಶೀಘ್ರ ಸಾಕಾರಗೊಳ್ಳಲಿದೆ.
ನಿತ್ಯ ವಿತರಣೆ:
ಎ.3 – 7.5 ಟನ್, ಎ.4 – 8.13 ಟನ್, ಎ.5 – 10.37 ಟನ್, ಎ.6 – 7.4 ಟನ್, ಎ.7 – 9.43 ಟನ್, ಎ.8 – 10.96ಟನ್, ಎ.9 – 8.57 ಟನ್, ಎ.10 – 9.14ಟನ್, ಎ.11 – 31.45ಟನ್, ಎ.12 – 18.3ಟನ್, ಎ.13 – 25ಟನ್, ಎ.14 -29.43ಟನ್, ಎ.15 – 26.59 ಟನ್, ಎ.16 – 43.51ಟನ್, ಎ.17 – 44.26ಟನ್, ಎ.18 – 42.34ಟನ್, ಎ.19 – 67.45ಟನ್, ಎ.20 – 59.19ಟನ್, ಎ.21 – 79.12ಟನ್, ಎ.22 – 76.63ಟನ್ ವಿತರಣೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.