ನವದೆಹಲಿ: ಕಮಿಷನ್ಗಳಲ್ಲಿ ಏರಿಕೆ ಮಾಡಬೇಕು ಎಂಬ ತಮ್ಮ ಬೇಡಿಕೆಯನ್ನು ಈಡೇರಿಸದೇ ಹೋದರೆ ಮೇ೧೦ರವರೆಗೆ ಪ್ರತಿ ಭಾನುವಾರ ಪೆಟ್ರೋಲ್ ಬಂಕ್ಗಳನ್ನು ಮುಚ್ಚುತ್ತೇವೆ ಎಂಬುದಾಗಿ ಪೆಟ್ರೋಲ್ ಮಾಲೀಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಮೇ 10ರ ಬಳಿಕ ದಿನದಲ್ಲಿ ಕೇವಲ 8 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸುತ್ತೇವೆ ಎಂಬುದಾಗಿಯೂ ಎಚ್ಚರಿಸಿದ್ದಾರೆ.
ಮೇ 10ನ್ನು ‘ಖರೀದಿ ಇಲ್ಲ ದಿನ’ (ನೋ ಪರ್ಚೆಸ್ ಡೇ) ಆಗಿ ಆಚರಿಸುವುದಾಗಿ ತಿಳಿಸಿದ್ದಾರೆ.
‘ಓಯಿಲ್ ಮಾರ್ಕೆಟಿಂಗ್ ಕಂಪನಿಗಳು ಡೀಲರ್ ಕಮಿಷನ್ನನ್ನು ಪರಿಷ್ಕರಿಸುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ನಾವು ಜನವರಿಯಲ್ಲಿ ಮುಷ್ಕರವನ್ನು ಹಿಂಪಡೆದುಕೊಂಡಿದ್ದೆವು. ಆದರೆ ನಾಲ್ಕು ತಿಂಗಳಲ್ಲಿ ಏನೂ ಆಗಲೇ ಇಲ್ಲ’ ಎಂದು ಪೆಟ್ರೋಲ್ ಡೀಲರ್ಸ್ ಅಸೋಸಿಯೇಶನ್ ಹೇಳಿದೆ.
ಫಿಲ್ಲಿಂಗ್ ಸ್ಟೇಶನ್ಗಳಲ್ಲಿ ಮಲ್ಟಿಪಲ್ ಶಿಫ್ಟ್ಗಳಿಗಾಗಿ ಲೈಟಿಂಗ್, ಮಾನವ ಸಂಪನ್ಮೂಲ, ಮತ್ತಿತರ ವ್ಯವಸ್ಥೆಗಳ ಹೆಚ್ಚುತ್ತಿರುವ ದರವನ್ನು ಭರಿಸುವುದು ಅಸಾಧ್ಯವಾಗುತ್ತಿದೆ. ಹೀಗಾಗೀ ಕಮಿಷನ್ ದರ ಹೆಚ್ಚಿಸಬೇಕು ಎಂದು ಅಸೊಸಿಯೇಶನ್ ಒತ್ತಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.