ಭೋಪಾಲ್: ಮಧ್ಯಪ್ರದೇಶ ಸರ್ಕಾರ ಒಂದು ವರ್ಷ ಅವಧಿಯ ‘ಪೌರೋಹಿತ್ಯ’ ಡಿಪ್ಲೋಮ ಕೋರ್ಸುನ್ನು ಆರಂಭಿಸಲಿದೆ. ಜಾತಿ ಧರ್ಮದ ಬೇಧವಿಲ್ಲದೆ ಪರಿಶಿಷ್ಟ ಜಾತಿಯವರಿಂದ ಹಿಡಿದು ಬ್ರಾಹ್ಮಣವರೆಗೆ ಎಲ್ಲರೂ ಈ ಕೋರ್ಸುಗೆ ಅರ್ಜಿ ಹಾಕಬಹುದಾಗಿದೆ.
‘ಪೌರೋಹಿತ್ಯಂ’ ಎಂದು ಕೋರ್ಸಿಗೆ ಹೆಸರಿಸಲಾಗಿದ್ದು, ಜುಲೈ ತಿಂಗಳಿನಿಂದ ಆರಂಭಗೊಳ್ಳಲಿದೆ. ಹಿಂದೂ ಪದ್ಧತಿಯಂತೆ ಪೌರೋಹಿತ್ಯ, ಶಾಸ್ತ್ರ, ವಿಧಿ, ವಿಧಾನ ಸಂಪ್ರದಾಯ, ಮಂತ್ರಗಳನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ.
ಅಲ್ಲದೇ ‘ಸಂಸ್ಕಾರ’ ಗ್ರಂಥಗಳನ್ನು (ಗ್ರಹ್ಯ ಸೂತ್ರ), ಸಂಸ್ಕಾರ ಸಿದ್ಧಾಂತ ಮತ್ತು 9 ಹಿಂದೂ ಸಂಸ್ಕಾರಗಳನ್ನೂ ಇಲ್ಲಿ ಹೇಳಿಕೊಡಲಾಗುತ್ತದೆ.
ಈ ಕೋರ್ಸು ಪಡೆಯಲು ಕೇವಲ ೧೨ನೇ ತರಗತಿ ಪಾಸಗಿರಬೇಕು ಎಂಬ ನಿಯಮವನ್ನು ಮಾತ್ರ ಇಡಲಾಗಿದೆ.
ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಇಂತಹ ಕೋರ್ಸನ್ನು ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.