ನವದೆಹಲಿ: ಟೆಬೆಟಿಯನ್ ಧರ್ಮಗುರು ದಲೈಲಾಮ ಅವರ ಅರುಣಾಚಲ ಪ್ರದೇಶ ಭೇಟಿ ಬುಧವಾರ ಆರಂಭಗೊಂಡಿದೆ. ಇದರಿಂದಾಗಿ ಚೀನಾ ಭಾರತದ ವಿರುದ್ಧ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಭಾರತ ಇದಕ್ಕೆ ಮನ್ನಣೆ ನೀಡದಿರಲು ನಿರ್ಧರಿಸಿದೆ.
ದಲೈಲಾಮ ಅವರ ಅರುಣಾಚಲ ಪ್ರದೇಶ ಭೇಟಿಯನ್ನು ಖಂಡಿಸಿರುವ ಚೀನಾಗೆ ಸರಿಯಾದ ತಿರುಗೇಟು ನೀಡಿರುವ ಭಾರತ, ನಮ್ಮ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಡಿ ಎಂದು ಕಟು ಸಂದೇಶ ರವಾನಿಸಿದೆ.
ದಲೈಲಾಮ ಅವರ ಅರುಣಾಚಲ ಭೇಟಿಯಲ್ಲಿ ಯಾವುದೇ ರಾಜಕೀಯ ಮಾಡಬಾರದು. ಭಾರತ ಎಂದಿಗೂ ತನ್ನ ನೆರೆಯ ರಾಷ್ಟ್ರಗಳ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಇದೇ ರೀತಿ ನಮ್ಮ ನೆರೆಯ ರಾಷ್ಟ್ರಗಳು ಕೂಡ ನಮ್ಮ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಬಯಸುತ್ತೇವೆ ಎಂದು ಕೇಂದ್ರ ಗೃಹಖಾತೆ ರಾಜ್ಯಸಚಿವ ಕಿರಣ್ ರಿಜ್ಜು ಹೇಳಿದ್ದಾರೆ.
ಈ ಹಿಂದೆ ಆರು ಬಾರಿ ದಲೈಲಾಮ ಅರುಣಾಚಲಕ್ಕೆ ಆಗಮಿಸಿದ್ದಾರೆ. ಈ ಭೇಟಿಗೆ ಯಾವುದೇ ಹೆಚ್ಚುವರಿ ಬಣ್ಣ ಲೇಪನ ಮಾಡುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.
ದಲೈಲಾಮರನ್ನು ಚೀನಾ ವಿರೋಧಿ, ಪ್ರತ್ಯೇಕತಾವಾದಿ ಎಂದು ಟೀಕಿಸುವ ಚೀನಾ, ಅವರಿಗೆ ಬೆಂಬಲ ನೀಡುತ್ತಿರುವ ಭಾರತದ ವಿರುದ್ಧ ಕಿಡಿಕಾರಿದೆ. ಅವರಿಗೆ ಅರುಣಾಚಲ ಭೇಟಿಗೆ ಅವಕಾಶ ಕೊಟ್ಟರೆ ಭಾರತ-ಚೀನಾದ ದ್ವಿಪಕ್ಷೀಯ ಸಂಬಂಧ ಹಳಿತಪ್ಪುತ್ತದೆ ಎಂದು ಎಚ್ಚರವನ್ನೂ ಭಾರತಕ್ಕೆ ನೀಡಿದೆ. ಆದರೆ ಚೀನಾ ಎಚ್ಚರಿಕೆಗೆ ಭಾರತ ಸೊಪ್ಪು ಹಾಕಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.