ತನ್ನ ಸಿಬ್ಬಂದಿಗಳೊಂದಿಗೆ ಅಸಭ್ಯ ವರ್ತನೆ ತೋರಿದ ರಾಜಕಾರಣಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಂಡು ಸುದ್ದಿಯಾದವರು ಏರ್ ಇಂಡಿಯಾ ಮುಖ್ಯಸ್ಥ ಹಾಗೂ ಆಡಳಿತ ನಿರ್ದೇಶಕ ಅಶ್ವನಿ ಲೊಹಾನಿ. ಕಟ್ಟುನಿಟ್ಟಿನ ಕಾರ್ಯಗಳು, ಯಾರನ್ನೂ ಕೇರ್ ಮಾಡದ ಎದೆಗಾರಿಕೆ ಇವರನ್ನೀಗ ದಷ್ಟ ಮುಖ್ಯಸ್ಥನ ಸಾಲಿನಲ್ಲಿ ತಂದು ನಿಲ್ಲಿಸಿದೆ. ಉದ್ಯೋಗಿಗಳು ಮೊದಲು, ಅಮೇಲೆ ಗ್ರಾಹಕರು ಎಂಬ ತತ್ವವನ್ನು ಪಾಲನೆ ಮಾಡುವವರು ಇವರು. ಉದ್ಯೋಗಿಗಳ ಬಗ್ಗೆ ಕಾಳಜಿ ವಹಸಿಕೊಂಡರೆ ಸಂಸ್ಥೆ ಬೆಳವಣಿಗೆಯಾಗುತ್ತದೆ ಎಂಬುದು ಇವರ ಅಚಲ ನಂಬಿಕೆ.
ತನ್ನ ಸಂಸ್ಥೆಯ ೬೦ ವರ್ಷದ ಸಿಬ್ಬಂದಿಯ ಮೇಲೆ ಕೈ ಮಾಡಿದ ರವೀಂದ್ರ ಗಾಯಕ್ವಾಡ್ ಎಂಬ ಶಿವಸೇನೆ ಸಂಸದನನ್ನು ದೇಶದ ಯಾವುದೇ ವಿಮಾನದಲ್ಲೂ ಪ್ರಯಾಣಿಸದಂತೆ ಮಾಡಿದ್ದು ಇವರ ಎದೆಗಾರಿಕೆಗೆ ಸಾಕ್ಷಿ. 2015ರಲ್ಲೂ ಇವರು ತನ್ನ ಸಿಬ್ಬಂದಿ ಮೇಲ್ ಕೈ ಮಾಡಿದ್ದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಿಥುನ್ ರೆಡ್ಡಿಯ ಬಂಧನವಾಗುವಂತೆ ಇವರು ಮಾಡಿದ್ದರು. ಈ ಮೂಲಕ ’ಉದ್ಯೋಗಿಗಳು ಮೊದಲು, ಅಮೇಲೆ ಗ್ರಾಹಕರು’ ಎಂಬ ತಮ್ಮ ತತ್ವವನ್ನು ಅವರಿಲ್ಲಿ ಅಕ್ಷರಶಃ ಪಾಲನೆ ಮಾಡಿದ್ದರು. ಕೇವಲ ಏರ್ಇಂಡಿಯಾ ಮಾತ್ರವಲ್ಲ ದೇಶದ ಇತರ ವಿಮಾನಯಾನಗಳೂ ಈ ಘಟನೆಯಲ್ಲಿ ತಮ್ಮೊಂದಿಗೆ ನಿಲ್ಲುವಂತೆ ಅವರು ಮಾಡಿದ್ದಾರೆ ಎಂಬುದು ಗಮನಾರ್ಹ.
ತನ್ನ ಸಂಸ್ಥೆಯ ವಿರುದ್ಧವೇ ಟೀಕೆಗಳನ್ನು ಮಾಡುವ ಪ್ರಾಮಾಣಿಕತೆ ಅವರಲ್ಲಿದೆ. ಏರ್ ಇಂಡಿಯಾ ಒಂದು ಕಾಯಿಲೆ ಪೀಡಿತ ಸಂಸ್ಥೆ ಎಂದಿರುವ ಅವರು, ನಮ್ಮ ಖರ್ಚುವೆಚ್ಚಗಳನ್ನು ನಮ್ಮ ಆದಾಯದಿಂದಲೇ ಭರಿಸದ ಹೊರತು ಕಾಯಿಲೆಯಿಂದ ಹೊರಬರಲು ಸಾಧ್ಯವಿಲ್ಲ ಎಂದಿದ್ದಾರೆ. ಏರ್ ಇಂಡಿಯಾ ಹೊತ್ತಿರುವ ೫೦ ಸಾವಿರ ಕೋಟಿ ಸಾಲವನ್ನು ಸಂದಾಯ ಮಾಡಿ ಅದನ್ನು ನಷ್ಟದಿಂದ ಲಾಭದ ಕಡೆಗೆ ತರಲು ಶತಪ್ರಯತ್ನಗಳನ್ನು ಮಾಡುತ್ತಿದ್ದಾರೆ.
4 ಎಂಜಿನಿಯರಿಂಗ್ ಪದವಿಗಳನ್ನು 4 ವರ್ಷಗಳಲ್ಲಿ ಮುಗಿಸುವ ಮೂಲಕ ಲಿಮ್ಕಾ ದಾಖಲೆ ಮಾಡಿದ ಹಾಗೂ ಎರಡು ಪುಸ್ತಕಗಳನ್ನು ಬರೆದ ಕೀರ್ತಿಯೂ ಇವರಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.