ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಸವನ್ನುಂಟು ಮಾಡಿ ವಾರದಲ್ಲಿ ಮೂರು ದಿನ ನೀರು ಪೂರೈಕೆ ಮಾಡದೆ ಎರಡು ದಿನ ನೀರು ಸರಬರಾಜು ಮಾಡಿ ಮೇಯರ್ರವರು ಮ.ನ. ಪಾಲಿಕೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕುಂಟು ನೆಪ ಮಾಡಿ ಏಕಪಕ್ಷೀಯ ನಿರ್ಣಯ ತೆಗೆದುಕೊಂಡು ಸರ್ವಾಧಿಕಾರಿ ಧೋರಣೆಯನ್ನು ಮಾಡಿದ್ದಾರೆ. ಮಹಾನಗರ ಪಾಲಿಕೆಯ ಅಧಿಕಾರಿಗಳ ಹೇಳಿಕೆಯ ಪ್ರಕಾರ ತುಂಬೆ ವೆಂಟೆಂಡ್ ಡ್ಯಾಂ ನಲ್ಲಿ 15 1/2 ಅಡಿ ನೀರು, ಎಅರ್ಅರ್ನಲ್ಲಿ 18 ಮೀಟರ್ ನೀರು ಹಾಗೂ ನೆಕ್ಕಿಲಾಡಿ ಡ್ಯಾಂ ನಲ್ಲಿ ನೀರು ತುಂಬಿದ್ದರೂ ಕೂಡ ಮೇಯರ್ ರವರು ಮ.ನ.ಪಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತೆಗೆದುಕೊಂಡ ನಿರ್ಣಯವು ಜನವಿರೋಧಿ ಹಾಗೂ ಜನನೀತಿವಿರೋಧಿಯಾಗಿರುತ್ತದೆ. ಮತ್ತು ಕೈಗಾರಿಕಾ ಲಾಬಿಗೆ ಬೋರ್ವೆಲ್ ಮತ್ತು ಖಾಸಗಿ ನೀರು ಸರಬರಾಜು ಮಾಡುವವರ ಲಾಭಿಗೆ ಮಣಿದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತೋ ಎಂಬ ಸಂಶಯಕ್ಕೆ ಕಾರಣವಾಗಿದೆ.
ಉದ್ದಿಮೆ ಪರವಾನಿಗೆಯೊಂದಿಗೆ ಘನತ್ಯಾಜ ವಿಲೇವಾರಿ ಶುಲ್ಕವನ್ನು ನಿಗದಿ ಮಾಡಿರುವುದು ಕೂಡಾ ಏಕ ಪಕ್ಷೀಯ ಮತ್ತು ಅವೈಜ್ಞಾನಿಕವೂ ಆಗಿರುತ್ತದೆ. ಇದರಿಂದ ಚಿಕ್ಕ ಪುಟ್ಟ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುವಂತಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳ ಅಬ್ಬರ, ಸೆಲ್ ಮಾರ್ಕೆಟಿಂಗ್ , ಬೃಹತ್ ಮಾಲ್ಗಳ ವಿವಿಧ ಬಂಡವಾಳಶಾಹಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿರುವುದು ಒಂದಾದರೆ ವರ್ಷದಿಂದ ವರ್ಷಕ್ಕೆ ಏರುತ್ತಿರುವ ಬಾಡಿಗೆ, ವಿದ್ಯುಚಕ್ತಿ ಬಿಲ್ ಮತ್ತು ಕುಸಿಯುತ್ತಿರುವ ವ್ಯಾಪಾರ ಇದರಿಂದ ಕಂಗೆಟ್ಟ ವ್ಯಾಪಾರಸ್ಥರನ್ನು ಮ.ನ.ಪಾದ ಘನ ತ್ಯಾಜ ಶುಲ್ಕ ಮತ್ತು ಉದ್ದಿಮೆ ಪರವಾನಿಗೆ ಏರಿಕೆ ಇತ್ಯಾದಿಯಿಂದ ವ್ಯಾಪಾರಸ್ಥರು ಬೀದಿಪಾಲಾಗುವಂತೆ ಮಾಡಲು ಹೊರಟಿದೆ.
ಸಾಂಪ್ರದಾಯಿಕ ವ್ಯಾಪಾರಸ್ಥರು ಜೀವನ ನಿರ್ವಹಿಸಲು ಕಷ್ಟ ಪಡುತ್ತಿರುವ ಈ ಸಂದರ್ಭದಲ್ಲಿ ಪಾಲಿಕೆಯ ಆಡಳಿತ ಉದ್ದಿಮೆ ಪರವಾನಿಗೆ ಶುಲ್ಕದೊಂದಿಗೆ ದೊಡ್ಡ ಪ್ರಮಾಣದಲ್ಲಿ ಘನತ್ಯಾಜ ವಿಲೇವಾರಿ ಶುಲ್ಕವನ್ನು ನಿಗದಿ ಮಾಡಿರುವುದರಿಂದ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಮ.ನ.ಪಾಲಿಕೆಯ ಸಾರ್ವಜನಿಕ ಮತ್ತು ಬಡಜನ ವಿರೋಧಿ ನೀತಿಯನ್ನು ವಿರೋಧಿಸಿ ಬಾ.ಜ.ಪ ಮಂಗಳೂರು ನಗದ ದಕ್ಷಿಣ ಮತ್ತು ನಗರ ಉತ್ತರ ವಿಧಾನಸಭಾ ಸಮಿತಿಗಳ ನೇತೃತ್ವದಲ್ಲಿ ಈ ಕೆಳಗಿನಂತೆ ಮಹಾನಗರ ಪಾಲಿಕೆಯಾದಿಯಂತೆ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದೆ.
ಮಂಗಳೂರು ನಗರ ಉತ್ತರದ ವತಿಯಿಂದ ದಿನಾಂಕ 5-4-2017 ಸುರತ್ಕಲ್ ಜಂಕ್ಷನ್ನಲ್ಲಿ ಬೆಳಿಗ್ಗೆ 10 ಗಂಟೆ ಮತ್ತು 7-4-2017 ರಂದು ಶುಕ್ರವಾರ ಕಾವೂರು ಜಂಕ್ಷನ್ನಲ್ಲಿ ಬೆಳಿಗ್ಗೆ 10 ಗಂಟೆಗೆ, ಮ.ನ.ದಕ್ಷಿಣದ ಪಶ್ಚಿಮ ಮತ್ತು ಉತ್ತರ ಶಕ್ತಿಕೇಂದ್ರದ ವತಿಯಿಂದ ದಿನಾಂಕ 6-4-17 ರಂದು ಅರ್.ಟಿ.ಓ ಜಂಕ್ಷನ್ ಬಳಿ ಬೆಳಿಗ್ಗೆ 10 ಗಂಟೆ ಹಾಗೂ ಮ.ನ. ದಕ್ಷಿಣದ ಪೂರ್ವ ಮತ್ತು ದಕ್ಷಿಣ ಶಕ್ತಿಕೇಂದ್ರದ ವತಿಯಿಂದ 7-4-2017 ರಂದು ಶುಕ್ರವಾರ ಕದ್ರಿ ಮಲ್ಲಿಕಟ್ಟೆ ಜಂಕ್ಷನ್ ಬೆಳಿಗ್ಗೆ 10 ಗಂಟೆ ತಾರೀಕು 12-4-2017 ರಂದು ಬುಧವಾರ ಮ.ನ.ಪಾಲಿಕೆಯ ಎದುರು ಬೆಳಿಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತದೆ. ಈ ಪ್ರತಿಭಟನೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಾಜಿ ವಿಧಾನ ಪರಿಷತ್ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮೋನಪ್ಪ ಭಂಡಾರಿ ವಿನಂತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.