ಸಂತೋಷ ನೆಮ್ಮದಿಯ ಬದುಕಿನ ಮದ್ದು. ಸಾವಿನ ಕ್ಷಣದಲ್ಲಿ ನಗುಮುಖದಲ್ಲಿ ಸಾಗುವವನೇ ನಿಜ ಬದುಕು ಅನುಭವಿಸಿದ ಅನುಭಾವಿ. ಅಂತಹ ವ್ಯಕ್ತಿಗಳೇ ಅಜರಾಮರ. ರಾತ್ರಿ ಮಲಗುವಾಗ ಹಾಗೂ ಬೆಳಿಗ್ಗೆ ಏಳುವಾಗ ನಕ್ಕೋತ ಏಳಬೇಕು. ಎದ್ದಾಕ್ಷಣ ಬದುಕಿನ ತುಂಬೆಲ್ಲ ಒಂದಿಷ್ಟು ಹೂವುಗಳನ್ನು ಹರಡಬೇಕು.
ಭಾರತ ಸಂತರು, ಚಿಂತಕರು, ಶರಣರನ್ನು, ಎತ್ತರದ ಹಿಮಪಾತ, ಗಿರಿಪರ್ವತ, ಸುತ್ತಲೂ ಸಾಗರ-ಸರೋವರ, ಮಧ್ಯದಲ್ಲಿ ಒಂದಿಷ್ಟು ನದಿಗಳು. ಮಳೆ, ಬಿಸಿ-ಚಳಿ-ಗಾಳಿ ಹೊಂದಿರುವ ಅದ್ಭುತ ಜಗತ್ತು. ಇಲ್ಲಿ ಜನಿಸಿದವನೇ ಭಾಗ್ಯವಂತ.
ಇಂಥ ಸುಂದರ ಜಗತ್ತಿನಲ್ಲಿ ಯಾವುದಕ್ಕೂ ಕೊರತೆ ಇಲ್ಲ. ನೋಡಾಕ ನಿಸರ್ಗ, ಉತ್ತಮ ಚಿಂತನಧಾರೆ, ತುಸು ಮಾತು, ಆತ್ಮೀಯತೆ ಬದುಕಿಗೆ ಇಷ್ಟು ಸಾಕು. ಜೀವನ ಸಾಗಿಸಲು ಇನ್ನೇನು ಬೇಕು..? ಸಂತರು ಹೇಳಿದ ಮಾತುಗಳು ಮಧುರ. ಅವುಗಳಲ್ಲಿ ದ್ವೇಷವಿಲ್ಲ, ಮಾತ್ಸರ್ಯವಿಲ್ಲ ಹೀಗಾಗಿ ಅರ್ಥಪೂರ್ಣವಾದ ಮಾತುಗಳನ್ನು ಹೇಳಿದ್ದಾರೆ ಶರಣರು.
ಆಗೊಮ್ಮೆ-ಈಗೊಮ್ಮೆ ಒಂದಿಷ್ಟು ಉತ್ತಮ ವಿಚಾರ ಮೆಲಕು ಹಾಕಬೇಕು. ಏಕೆಂದರೆ ಕಾಲವೂ ನಿಷ್ಪಕ್ಷಪಾತ. ಅದು ಮನುಷ್ಯನನ್ನು ಸ್ಪರ್ಶಿಸುವ ಮನ್ನವೇ ಮನಸ್ಸಿನ ಕಲ್ಮಶ ತೊಳೆದು ಹಾಕಿ ಸತ್ಕಾರ್ಯಗಳಿಂದ ಸದ್ಭಾವಯೋಗ ರೂಢಿಸಿಕೊಳ್ಳಬೇಕು. ಹೀಗಾಗಿ ಬದುಕಿನ ಸತ್ಯವನ್ನು ಅರಿತು ನಡೆಯಬೇಕು. ದುಶ್ಚಟಗಳಿಂದ ಮುಕ್ತರಾಗಿ ಜೀವನ ಸಾಗಿಸಬೇಕು.
ಏಳುವಾಗ ಮುಖದಲ್ಲಿ ತುಸು ಪ್ರಸನ್ನತೆ, ಮುಗುಳ್ನಗೆ, ಸಂತೋಷ ಇಷ್ಟು ಸಾಕು ಸದ್ಭಾವಯೋಗಕ್ಕೆ. ಜೀವನ ಶೃಂಗಾರಕ್ಕೆ. ಬದುಕಿಗೆ ಶೃಂಗಾರ ಇರದಿದ್ದರೆ, ಏನಿದ್ದರೆ ಏನು ಪ್ರಯೋಜನ? ಹಾಸಿಗೆ ಇರೋದ ಬೆಲೆ ಕಟ್ಟಲು ಅಲ್ಲ, ಹಾಸಿಗೆ ಮರೆತು ಸುಖ ನಿದ್ರೆ ಮಾಡೋಕೆ. ಹಾಸಿಗೆ, ಕಪಾಟು, ಮನೆ ಇವೆಲ್ಲ ಮರೆತು ಮಲಗಿ ಆಗ ಸಂತೋಷ ಸಿಗಲಿದೆ.
ಮನುಕುಲ ನಿಂತಿರುವುದೇ ವಿಶ್ವಾಸದ ಮೇಲೆ. ಪ್ರೀತಿಯ ಹೃದಯ ದೇವಸತ್ವ. ಪರಸ್ಪರ ವಿಶ್ವಾಸದಿಂದ ಇದ್ದಾಗ ಕುಟುಂಬ, ಸಮಾಜ, ದೇಶ ಶಾಂತವಾಗಿರುತ್ತದೆ. ಈ ಜಗತ್ತಿನಲ್ಲಿ ಸಂತಯೋಗಿ ಜ್ಞಾನಿಯಾಗಿರಿ.
ಯಶಸ್ಸಿಗೆ ಶ್ರಮಿಸಿದಕ್ಕೆ ಕೃತಜ್ಞ
ಕರ್ನಾಟಕ ಕಾಲೇಜು ಮೈದಾನದಲ್ಲಿ 36 ದಿನಗಳ ಕಾಲ ನಡೆದ ಪ್ರವಚನದಲ್ಲಿ ಸಿದ್ಧೇಶ್ವರ ಶ್ರೀಗಳು ನಮ್ಮ ಭಾವ ಶುದ್ಧಗೊಳಿಸಿದ್ದಾರೆ. ಬದುಕಿನ ಸನ್ಮಾರ್ಗ ತೋರಿಸಿದ್ದಾರೆ. ಪ್ರವಚನದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞೆಗಳು. ಇಂಥ ಶ್ರೀಗಳ ಪ್ರವಚನದ ರಸದೌತಣದ ಭಾಗ್ಯ ಪುನಃ ಧಾರವಾಡಿಗರಿಗೆ ಬೇಗನೆ ಸಿಗುವಂತಾಗಲಿ.-ಅರವಿಂದ ಬೆಲ್ಲದ, ಶಾಸಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.