ಧಾರವಾಡ: ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಭಾಗ್ಯವಲ್ಲ. ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾಗಿರುವ ಸಾವಯವ ಮೇಳದಲ್ಲಿ ಕಂಡು ಬಂದ ಬಗೆ.
ಕೃಷಿ ವಿಶ್ವವಿದ್ಯಾಲಯ, ಸಾವಯವ ಕೃಷಿ ಸಂಸ್ಥೆ ಹಾಗೂ ವಿಸ್ತರಣಾ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಆರಂಭವಾದ 3 ದಿನಗಳ ಸಾವಯವ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಯ ರೈತರು, ಸಾವಯವ ಉತ್ಪನ್ನ ಉತ್ಪಾದಕ ಸಂಘ ಸಂಸ್ಥೆಗಳು ಸಾವಯವ ಲೋಕವನ್ನೇ ಪ್ರದರ್ಶನಕ್ಕಿಟ್ಟಿದ್ದಾರೆ.
ಕೆಂಪಕ್ಕಿ, ನವಣಿ, ಸಜ್ಜಿ, ರಾಗಿ, ಬೆಲ್ಲ, ಜೇನುತುಪ್ಪ, ಅರಿಷಿಣ, ಸೋಯಾಬಿನ್, ಶೇಂಗಾ, ಮೆಣಸಿನಕಾಯಿ, ಸಾವಯವ ವಿಧಾನದಲ್ಲಿ ತಯಾರಾದ ರುಚಿಕರ ಉಪ್ಪಿನಕಾಯಿಗಳು, ವಿವಿಧ ಬಗೆಯ ಖಾದ್ಯಗಳು, ಸಾವಯವ ತರಕಾರಿ, ಜವೆ ಗೋಧಿ, ದೇಸಿ ತುಪ್ಪ ಹೀಗೇ ಅಲ್ಲಿದ್ದ ಎಲ್ಲ ಪದಾರ್ಥಗಳೂ ಸಾವಯವ ವಿಧಾನದಿಂದ ತಯಾರಾಗಿದ್ದವು.
ಬಿ.ಪಿ., ಶುಗರ್ ಇತ್ಯಾದಿಗಳಿಗೆಲ್ಲ ಅಲ್ಲಿನ ಪದಾರ್ಥಗಳಲ್ಲಿ ಮದ್ದಿತ್ತು. ಕೆಂಪಕ್ಕಿ ಶುಗರ್ ಇದ್ದವರಿಗೆ ಅನುಕೂಲವಂತೆ. ಹೀಗೇ ದೇಸಿ ಬೆಳೆಗಳು ಮೇಳದಲ್ಲಿ ಲಭ್ಯವಿದ್ದು, ಪಕ್ಕಾ ಆರೋಗ್ಯಕ್ಕೆ ಸಹಕಾರಿಯಾಗಬಲ್ಲವು ಎನ್ನಬಹುದು.
ಹೊನ್ನಾವರ, ಶಿರಸಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ, ಯಾದಗಿರಿ, ಸಂಕೇಶ್ವರ, ಹುಬ್ಬಳ್ಳಿ – ಧಾರವಾಡ ಮುಂತಾದ ಜಿಲ್ಲೆ ಹಾಗೂ ತಾಲ್ಲೂಕು ಸ್ಥಳಗಳಿಂದ ಆಗಮಿಸಿರುವ ರೈತರು ಸಾವಯವ ಮೇಳಕ್ಕೆ ಕಳೆ ತುಂಬಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.