ನವದೆಹಲಿ: ರಾಮಸೇತು ಪ್ರಾಕೃತಿಕವಾಗಿ ನಿರ್ಮಿತಗೊಂಡಿದ್ದೇ ಅಥವಾ ಮನುಷ್ಯ ನಿರ್ಮಿತವಾದುದ್ದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ್(ಐಸಿಎಚ್ಆರ್) ಪ್ರಾಯೋಗಿಕ ಯೋಜನೆಯೊಂದನ್ನು ಆರಂಭಿಸಲು ಮುಂದಾಗಿದೆ.
ಐಸಿಎಸ್ಆರ್ ಮುಖ್ಯಸ್ಥ ವೈ.ಸುದ್ರೇಶನ್ ರಾವ್ ಈ ಬೆಳವಣಿಗೆಯನ್ನು ಸ್ಪಷ್ಟಪಡಿಸಿದ್ದಾರೆ.
ಐಸಿಎಸ್ಆರ್ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಶೋಧನ ಆಧಾರಿತ ಸಂಸ್ಥೆಯಾಗಿದೆ.
ಇದೀಗ ಈ ಸಂಸ್ಥೆಯು ಸಮುದ್ರದಲ್ಲಿ ನಿರ್ಮಾಣವಾಗಿರುವ ಸೇತುವೆ ನೈಸರ್ಗಿಕವಾಗಿದ್ದೇ ಅಥವಾ ಮನುಷ್ಯ ನಿರ್ಮಿಸಿದ್ದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಂಶೋಧನೆ ಆರಂಭಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.