ಸದ್ಭಾವ ಸಾಧನ ಇಲ್ಲಂದ್ರ ಸಿದ್ಧಿ ಉಂಟಾಗಲ್ಲ. ಒಂದು ವೃಕ್ಷಕ್ಕೆ ಹಣ್ಣು ತಯಾರು ಮಾಡಲು ಹೇಗೆ ವರುಷ, ವರುಷ ಬೇಕೋ ಹಾಗೆ ನಮ್ಮದು ಒಂದು ಸಾಧನೆ. ಒಂದು ವೃಕ್ಷ ಇದ್ದಂಗ. ಮೈ, ಕೈ, ಮನಸ್ಸು, ಬುದ್ಧಿ ಇವುಗಳನ್ನು ಬಳಸಿಕೊಂಡು ದುಡಿದು ಹಣ್ಣು ಕೊಡಬೇಕು. ನಮ್ಮದು ಒಂದು ಹಣ್ಣಲ್ಲ. ಪ್ರಶಾಂತಿಯ ಹಣ್ಣು, ಸತ್ಯಾನುಭವದ ಹಣ್ಣು.
ಹಂಗ ಒಂದಿಷ್ಟು ಗಳಿಸಿದರ, ವಿದ್ಯೆ ಕಲಿತರ ಮುಗಿಯಲ್ಲ. ಜೀವನದ ಅಂತಿಮ ಫಲ. ಇಲ್ಲಿ ಯಾವುದು ಶಾಶ್ವತ ಅಲ್ಲ, ಭಾವ ವಿಸ್ತಾರವನ್ನು ಅನುಭವಿಸೋದ, ಆನಂದ ಪಡಿಯೋದ, ಅದು ಪ್ರಶಾಂತಿ ಹಾಗೂ ಸತ್ಯಾನುಭವದ ಸಿದ್ಧಿ. ಕೋಟಿ ಕೋಟಿ ವರುಷದ ಫಲ ಮನುಷ್ಯ ಒಂದು ಜೀವ ಕಣ ೪೦೦ ಕೋಟಿ ವರುಷದ ನಂತರ ಇಂತಹ ಸುಂದರ ದೇಹ, ಅದ್ಭುತ ಮನಸ್ಸು, ಬುದ್ಧಿಯ ಸಾಮರ್ಥ್ಯ ಅರಳುವಂತೆ ಮಾಡಿತು. ವಿಶ್ವವನ್ನು ರೂಪಿಸುವ ಸತ್ಯ. ವಸ್ತುವನ್ನು ಅರಿತುಕೋ, ನನ್ನನ್ನ ಅರಿತುಕೋ, ನಿನ್ನ ಬದುಕಿನಲ್ಲಿ ನೀ ಅರಿತುಕೊಂಡು ಆನಂದಿಸಬೇಕು, ಅನುಭವಿಸಬೇಕು.
ಒಂದ ಸಣ್ಣ ಕೆಲಸ ಮಾಡಿ ನನ್ನ ಜೀವನ ಸಾರ್ಥಕ ಆಯಿತು ಅಂದ್ರೆ ಆಗಲ್ಲ. ಇದು ಸಣ್ಣಪುಟ್ಟ ಸಂಗತಿಗಳಿಗಾಗಿ ಇಲ್ಲ. ಇದು ಬದುಕಿನ ಉದ್ದೇಶ ಅಲ್ಲ. ಇದು ನಿತ್ಯ ನಿರಂತರವಾಗಬೇಕು. ವಿಶ್ವ ಬಯಸ್ತಾದ ನನ್ನನ್ನೂ ನೋಡು ಮನುಷ್ಯನೇ ಅಂತಾದ. ಒಂದಿಷ್ಟು ನಕ್ಷತ್ರಗಳನ್ನು ಹರಡಿ, ಅವುಗಳನ್ನು ತೇಲುವಂತೆ ಮಾಡಿನಿ ನೋಡಿಕೋ. ಮನುಷ್ಯನ ಮನಸ್ಸು ಅನುಭವಿಸಲು ತಯಾರಾದ ಸಲಕರಣೆ. ಯಾವುದು ಅನಂತ, ಅಮೃತ ಅದ ಅದನ್ನು ಅನುಭವಿಸು ಮನುಷ್ಯನೇ. ಮನಸ್ಸನ್ನು ಅರಿಯುವುದಕ್ಕಾಗಿ ಬಳಸು, ಬದುಕುವುದಕ್ಕಾಗಿ ಬಳಸು.
ಅದನ್ನು ಕುಡಿಯಲು, ಬಡಿದಾಡಲು ಅಲ್ಲ, ನಾಲ್ಕು ಕಾಸು ಗಳಿಸೋಲು ಅಲ್ಲ, ಅದರ ಸಾಮರ್ಥ್ಯ ಅರ್ಥ ಆಗಬೇಕು. ಮನುಷ್ಯನ ಬದುಕು ಒಂದು ಅಮೂಲ್ಯವಾದ ರತ್ನ ಇದ್ದ ಹಾಗೆ. ಅದನ್ನು ಕಲ್ಲು ಅಂತ ತಿಳಿದು ತೂಗದೆ, ಅದನ್ನು ಅರಿತುಕೊಂಡು ಮನಸ್ಸು, ಹೃದಯ, ಭಾವವನ್ನು ಬಳಸಿಕೊಳ್ಳಬೇಕು. ಅದನ್ನು ಸುಮ್ಮನೇ ಎದಕ್ಕರ ನೋಡೋಬಿಡೋದು ಅಂತ ಕೋರ್ಟ್ಗೆ ಹೋಗದು ಅಲ್ಲ. ಇದು ಜೀವ ರತ್ನ, ಭಾವ ರತ್ನ. ಇದು ಸಮರ್ಥ ಅದ ಶ್ರೀಮಂತ ಮಾಡ್ತಾದ, ಸಂತ ಮಾಡ್ತಾದ, ಪರಮ ಜ್ಞಾನಿ, ಶ್ರೇಷ್ಟ, ಆನಂದ ಭಾವವನ್ನಾಗಿ ಮಾಡ್ತಾದ. ಆದ್ರ ನಾವು ಏನನ್ನೋ ಮಾಡಕೋತ್ತ ಕಳಿಯೋದ ಅಲ್ಲ.
ಮನುಷ್ಯನಿಗೆ ಹಸಿವು ಇರಬೇಕು. ಅಷ್ಟಕ್ಕಾಗಿಯೇ ಜೀವನ ಅಲ್ಲ. ವಿಶ್ವಾನುಭವ, ಆನಂದ ಭಾವ ಎಲ್ಲರೂ ಪಡಿಯಬೇಕು. ಅದಕ್ಕೆ ಹೆಣ್ಣು-ಗಂಡು ಎಂಬ ಯಾವ ಭೇದ ಭಾವವಿಲ್ಲ. ಅದು ಎಲ್ಲರ ಜೀವನದ ಉದ್ದೇಶವಾಗಬೇಕು.
ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳ 14-03-2017 ರ ಪ್ರವಚನ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.