ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಾಖಲಿಸಿದ ಅಭೂತಪೂರ್ವ ಗೆಲುವು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. 14 ವರ್ಷಗಳ ಬಳಿಕ ಅಲ್ಲಿ ಕಮಲ ಅರಳಿದ್ದು, ಕಾಂಗ್ರೆಸ್, ಸಮಾಜವಾದಿ ಮತ್ತು ಬಿಎಸ್ಬಿ ಪಕ್ಷಗಳು ಧೂಳಿಪಟವಾಗಿವೆ.
ಉತ್ತರಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.19ರಷ್ಟಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಇವರೇ ನಿರ್ಣಾಯಕರು. ದಲಿತರು, ಯಾದವರೊಂದಿಗೆ ಮುಸ್ಲಿಮರನ್ನೂ ಕಾಂಗ್ರೆಸ್, ಸಮಾಜವಾದಿ, ಬಿಎಸ್ಪಿ ಪಕ್ಷಗಳು ವೋಟ್ಬ್ಯಾಂಕ್ ಮಾಡಿಕೊಂಡಿವೆ.
2012ರ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಬರೋಬ್ಬರಿ 69 ಶಾಸಕರು ವಿಧಾನಸಭೆಗೆ ಆಯ್ಕೆಗೊಂಡಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಈ ಸಂಖ್ಯೆ 24ಕ್ಕೆ ಇಳಿಕೆಯಾಗಿದೆ.
ಮುಸ್ಲಿಂ ಮತಗಳು ಒಡೆದು ಹೋಗಬಾರದು ಎಂಬ ಕಾರಣಕ್ಕೆಯೇ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿಕೊಂಡಿದ್ದವು. ಆದರೆ ಅವುಗಳ ಲೆಕ್ಕಚಾರ ಈ ಬಾರಿ ಬುಡಮೇಲಾಗಿದೆ. ಆದರೆ 403 ಅಭ್ಯರ್ಥಿಗಳಲ್ಲಿ ಒಂದೇ ಒಂದು ಮುಸ್ಲಿಂ ಅಭ್ಯರ್ಥಿಯನ್ನೂ ಬಿಜೆಪಿ ಕಣಕ್ಕಿಳಿಸಿಲ್ಲ.
ಬಿಜೆಪಿ ಮಾಡಿದ ಅಭಿವೃದ್ಧಿ ಪರ ಪ್ರಚಾರ, ಆಡಳಿತ ವಿರೋಧಿ ಅಲೆಯಿಂದಾಗಿ ಈ ಬಾರಿ ಮುಸ್ಲಿಂ ಮತಗಳೂ ಬಿಜೆಪಿಗೆ ಬಿದ್ದಿವೆ ಎನ್ನಲಾಗುತ್ತಿದೆ. ಇದು ಅಲ್ಪಸಂಖ್ಯಾತ ಓಲೈಕೆಯಲ್ಲಿ ತೊಡಗಿದ್ದ ಕಾಂಗ್ರೆಸ್, ಸಮಾಜವಾದಿಗೆ ಮುಖಭಂಗವನ್ನುಂಟು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.