ಬೆಂಗಳೂರು: ಬೆಂಗಳೂರಿನ ಮಾರತಹಳ್ಳಿ-ಚಿನ್ನಪ್ಪನಹಳ್ಳಿ ನಡುವೆ ರಸ್ತೆಯ ಬದಿಗಳಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಮರಗಳನ್ನು ಕೇವಲ ಒಂದು ಐಫೋನ್ನ ಹೋರ್ಡಿಂಗ್ಗಾಗಿ ಬಲಿ ಪಡೆದ ಪ್ರಸಂಗ ನಡೆದಿದೆ.
ಐಫೋನ್ ಫಲಕಗಳು ಎದ್ದು ಕಾಣುವಂತೆ ಮಾಡಲು ರಸ್ತೆಯ ಬದಿಯಲ್ಲಿ ಬೆಳೆದಿದ್ದ ಮರಗಳಲ್ಲಿ 17 ಮರಗಳಿಗೆ ಜಾಹೀರಾತು ಕಂಪೆನಿಯೊಂದು ವಿಷ ಹಾಕಿ ಬಲಿ ಪಡೆದರೆ, ಇನ್ನು 13 ಮರಗಳನ್ನು ಕಡಿಯಲಾಗಿದೆ ಎಂದು ಮಹಾದೇವಪುರ ವಲಯದ ಬಿಬಿಎಂಪಿ (ಅರಣ್ಯ) ಸಹಾಯಕ ಸಂರಕ್ಷಣಾಧಿಕಾರಿ ತಿಮ್ಮಪ್ಪ ಹೇಳಿದ್ದಾರೆ.
ಫ್ರೇಜರ್ ಟೌನ್ನ ನೈಲ್ ಎಂಟರ್ಪ್ರೈಸಸ್ ಪ್ರೈ. ಲಿ. ಎಂಬ ಅನಧಿಕೃತ ಜಾಗೀರಾತು ಕಂಪೆನಿ ಆರ್ಚ್ ಬಿಶಪ್ ಅವರ ಮನೆಯ ಆವರಣದಲ್ಲಿ ಅಕ್ರಮವಾಗಿ ಈ ಫಲಕಗಳನ್ನು ಇರಿಸಿದೆ ಎಂದು ತಿಮ್ಮಪ್ಪ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.