ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯ 48ನೇ ಸ್ಥಾಪನಾ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ.
‘ತನ್ನ 48ನೇ ಸ್ಥಾಪನಾ ದಿನವಾದ ಇಂದು ಸಿಐಎಸ್ಎಫ್ಗೆ ಶುಭಾಶಯಗಳು. ಸಿಐಎಸ್ಎಫ್ ಪಡೆಗಳು ಭಾರತದಾದ್ಯಂತ ಪ್ರಮುಖ ಘಟಕಗಳು ಹಾಗೂ ಸಂಸ್ಥೆಗಳ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Greetings to @CISFHQrs on their 48th Raising Day. This dynamic force plays a vital role in securing key units & establishments across India.
— Narendra Modi (@narendramodi) March 10, 2017
ಸಿಐಎಸ್ಎಫ್ ಸ್ಥಾಪನಾ ದಿನ (ರೈಸಿಂಗ್ ಡೇ)ವನ್ನು ಪ್ರತಿ ವರ್ಷ ಮಾರ್ಚ್ 10ರಂದು ಆಚರಿಸಲಾಗುತ್ತದೆ. 1969ರ ಮಾರ್ಚ್ 10 ರಂದು ಭಾರತದ ಸಂಸತ್ ಕಾಯಿದೆ ಅಡಿಯಲ್ಲಿ 2,800 ಸದಸ್ಯ ಬಲದೊಂದಿಗೆ ಸಿಐಎಸ್ಎಫ್ ಸ್ಥಾಪಿಸಲಾಗಿತ್ತು. 1983ರ ಜೂನ್ 15ರಂದು ಸಂಸತ್ನ ಕಾನೂನಿನ ಅಡಿಯಲ್ಲಿ ಇದನ್ನು ಗಣತಂತ್ರ ಭಾರತದ ಸಶಸ್ತ್ರ ಪಡೆಯನ್ನಾಗಿ ಮಾಡಲಾಯಿತು.
ಇದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ಮುಖ್ಯ ಕಚೇರಿ ದೆಹಲಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.