ಧಾರವಾಡ: ಭಾವದಲ್ಲಿನ ಮಾಲಿನ್ಯ ತೆಗೆಯುವುದೇ ಸದ್ಭಾವ ಯೋಗ. ಸತ್ಯದ ಅನುಭಾವ, ಆನಂದ ಆಗ್ತದ. ಆದ್ದರಿಂದ ಭಾವದಲ್ಲಿರುವ ಕಸ, ಕಡ್ಡಿ, ಧೂಳು ತೆಗೆದು ಹಾಕೋದು. ಹೊಲದಲ್ಲಿ ಬೆಳೆ ಬರಬೇಕಂದ್ರ ಭೂಮಿ ಸ್ವಚ್ಛ ಮಾಡಿ, ಸಮ ಆದ ಮೇಲೆ ಬೀಜ ಹಾಕ್ತೀವಿ. ಅದು ಚೆನ್ನಾಗಿ ಬೆಳೆದು ಫಲ ಕೊಡ್ತಾದ. ಆದರ ಕಸ, ಕಡ್ಡಿಯಿಂದ ಕೂಡಿದ ಹೊಲ ಹೇಂಗ ಫಲ ಕೊಡ್ತಾದ. ಹಂಗ ಭಾವ ಹೊಲಸ ಆದ್ರ ಫಲ ಕೊಡಲು ಆಗಲ್ಲ. ಹೀಗಾಗಿ ಭಾವ ಸ್ವಚ್ಛತೆ ಮಹತ್ವದ್ದು.
ಭಾವ ಹೊಲಸ ಮಾಡುವ ಸಂಗತಿಗಳು ಬಹಳ ಅದಾವು. ಪತಂಜಲಿ ಮಹರ್ಷಿಗಳು ಹೇಳ್ತಾರ, ಮಧ್ಯ ಮಧ್ಯ ಕಲ್ಲು, ಮುಳ್ಳು, ತೆಗ್ಗು, ಗುಂಡಿಗಳು ಬಿದ್ದಿರ್ತಾವ. ಆಗ ಯೋಗ ಮಾರ್ಗದಲ್ಲಿ ಹೋಗಲು ಆಗಲ್ಲ. ಭಾವ ಶುದ್ಧಿಕರಣ ಆಗಬೇಕು. ಹೂವಿನ ಸೌಂದರ್ಯವನ್ನ ಅನುಭವಿಸಬೇಕು ಅಂದ್ರ ಮನಸ್ಸು ಬೇಕು. ಜಗತ್ತಿನ ಆನಂದ, ವಿಸ್ತಾರ, ದಿವ್ಯತೆ ಅನುಭವಿಸಬೇಕು ಅಂದ್ರ ಭಾವ ಶುದ್ಧ ಬೇಕು. ಅರವಿಂದ ಮಹರ್ಷಿಗಳು ಹೇಳ್ತಾರ, ನಮ್ಮೊಳಗಿನ ದಿವ್ಯತೆ ಅನುಭವಿಸೋದ. ಆದ್ರ ಅದು ಹೊಲಸ ಆಗ್ಯಾದ. ಅದರಲ್ಲಿ ಅನೇಕ ಕಾಲುಷ್ಯ ಹರಡ್ಯಾವ. ಅದರಿಂದ ಭಾವ ಅಸಮರ್ಥ ಆಗ್ತಾದ. ಭಾವ ಪರಿಶುದ್ಧಗೊಳಿಸೋದ ಒಂದು ಸಾಧನ, ಪರಮಶುದ್ಧಿಯ ಸಾಧನವೇ ಸದ್ಭಾವ ಯೋಗ ಎಂದರು.
ಬಸವಣ್ಣವರು ಬಂದು ಈ ಜಗತ್ತಿಗೆ ಭಕ್ತಿಯೆಂಬ ಬಳ್ಳಿಯನ್ನು ಹರಡಿದರು ಎಂದು ಅವರ ಅಕ್ಕ ಹಾಗೂ ಮೊದಲಿನಿಂದ ಕೊನೆಯವರೆಗೆ ಅವರ ರಕ್ಷಕರು ಆಗಿದ್ದ ಅಕ್ಕ ನಾಗಮ್ಮನವರು ಹೇಳುತ್ತಾರೆ. ಭಕ್ತಿ ಅಂದ್ರೆ ಪರಮ ಸತ್ಯ, ಪ್ರೇಮ, ಶುದ್ಧ ಭಾವ. ಅದನ್ನ ಹರಗಕ್ಕ ನಾವ ಬಂದೀವಿ. ಭಾವ ಪರಿಶುದ್ಧಕ್ಕಿಂತ ಬೇರೆ ಯಾವುದಾದ ಹೇಳಿ. ಹೃದಯ ಮಾಲಿನ್ಯ ಆದ್ರ ಅನುಭವಿಸೋದ ಎನ್ ಅದ ಹೇಳಿ. ಅಲ್ಪ ಜ್ಞಾನ, ಮಿಥ್ಯ ಜ್ಞಾನವಿದ್ದರೆ ಏನೂ ಮಾಡಲು ಆಗಲ್ಲ. ಸರಿಯಾದ ಜ್ಞಾನ ಬೇಕಲ್ಲ, ನನ್ನ ಬಗ್ಗೆ, ಇನ್ನೊಬ್ಬರ ಬಗ್ಗೆ, ಜಗತ್ತಿನ ಬಗ್ಗೆ, ಸತ್ಯ ವಸ್ತುವಿನ ಬಗ್ಗೆ ಜ್ಞಾನ ಬೇಕು.
ತಪ್ಪು ಜ್ಞಾನವಿದ್ದರ ಜೀವನ ಸರಿಯಾಗಿ ನಡೆಯಲ್ಲ. ಅದರ ಬಗ್ಗೆ ನಾವೇ ತಪ್ಪು ತಿಳಿದುಕೊಂಡಿವಿ. ವಿಕಲ್ಪ, ಭ್ರಮಾ ಜಗತ್ತನ್ನ ನಿರ್ಮಾಣ ಮಾಡ್ತಿವಿ. ಅದಕ್ಕಾಗಿ ಸತ್ಯದ ಮಾರ್ಗದಲ್ಲಿ ಹೋಗಲು ಆಗಲ್ಲ. ಜಗತ್ತು ನಾವು ತಿಳಿದುಕೊಂಡಂಗ ಇಲ್ಲ. ನಮ್ಮ ಸುತ್ತಮುತ್ತ ವಿಷಮ ಅದ. ಸಮ, ಸಮ ಇಲ್ಲ. ಒಂದರ ಹಂಗ ಇನ್ನೊಂದು ಇಲ್ಲ. ಇಲ್ಲಿ ಕಾಲ, ದೇಶ, ಗುಣ, ಕಾರ್ಯದಲ್ಲಿ ಭಿನ್ನತಾ ಅದ. ಜಗತ್ತು ಜಗತ್ತು ದಂದ್ವ, ಭಿನ್ನತೆ ಮೇಲಿದೆ. ಅದನ್ನ ಸಮ ಮಾಡಕ್ಕ ಆಗ್ತಾದ ಏನು ?. ಇಲ್ಲ. ಇದು ಎಲ್ಲರಿಗೂ ಗೊತ್ತದ. ಜಗತ್ತು ಸದಾ ಬದಲಾಗ್ತದ. ಇಂದು ಇದ್ದಂಗ ನಾಳೆ ಇರಲ್ಲ, ಎಲ್ಲ ವಸ್ತುಗಳು ಬದಲಾಗ್ತಾವ. ಅಂತಹ ವಸ್ತುವಿಗೆ ಸಂಸಾರ ಅಂತಾರ.
ಪ್ರವಚನ: ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಶ್ರೀ, 10-03-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.