ಹುಬ್ಬಳ್ಳಿ: 20 ನೇ ಶತಮಾನದಲ್ಲಿ ನಡೆದ ದಂಗೆ ಹಾಗೂ ವಿಶ್ವ ಯುದ್ಧಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿದೆ. 21 ನೇ ಶತಮಾನದಲ್ಲಂತೂ ಭಯೋತ್ಪಾದನೆ ಮಾನವ ಹಕ್ಕುಗಳ ರಕ್ಷಣೆಗೆ ಸವಾಲಾಗಿ ಪರಿಣಮಿಸಿದೆ ಎಂದು ಡಾ.ಲೋಹಿತ್ ನಾಯ್ಕರ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಡೆದ ಮಾನವ ಹಕ್ಕುಗಳ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ದ್ವೇಷಪೂರಿತ ಅಪರಾಧಗಳು, ಆರ್ಥಿಕ ಅಭದ್ರತೆ ಮುಂತಾದವು ಮಾನವ ಹಕ್ಕುಗಳ ರಕ್ಷಣೆಗೆ ಬಹುದೊಡ್ಡ ಸವಾಲಾಗಿವೆ ಎಂದು ಅಭಿಪ್ರಾಯಪಟ್ಟರು.
ಮಾನವ ಹಕ್ಕುಗಳ ರಕ್ಷಣೆಯೇ ಕಾನೂನಿನ ಮುಖ್ಯ ಗುರಿಯಾಗಬೇಕು. ಶಿಕ್ಷಣದ ಧ್ಯೇಯವೂ ಮಾನವೀಯತೆಯನ್ನು ವೃದ್ಧಿಸುವ ನಿಟ್ಟಿನಲ್ಲಿಯೇ ಸಾಗಬೇಕು ಎಂದ ಅವರು, ಮೌಲ್ಯಯುತ ಬದುಕಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಪ್ರಭಾರ ಕುಲಪತಿ ಡಾ. ಸಿ. ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರಿ ಕುಲಸಚಿವೆ (ಆಡಳಿತ) ಡಾ. ರತ್ನಾ ಭರಮಗೌಡರ, ಪರೀಕ್ಷಾಂಗ ವಿಭಾಗದ ಪ್ರಭಾರಿ ಕುಲಸಚಿವ ಡಾ. ಜಿ. ಬಿ. ಪಾಟೀಲ, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೊ. ಉಷಾ ಮೂರ್ತಿ, ಸಂತೋಷ ನರಗುಂದ, ಡಾ. ಬಿ.ಎಂ. ರತ್ನಾಕರ, ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾನವ ಹಕ್ಕುಗಳ ವಿವಿಧ ಆಯಾಮದ ಕುರಿತು ಉಪನ್ಯಾಸ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.