ನವದೆಹಲಿ: ಅನಾಣ್ಯೀಕರಣ ಕುರಿತು ಆ್ಯಪಲ್ ಸಿಇಒ ಟಿಮ್ ಕುಕ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ವಿಶ್ವ ಬ್ಯಾಂಕ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಅವರ ಪ್ರಶಂಸೆಯನ್ನು ಉದಾಹಸುತ್ತ, ಅನಾಣ್ಯೀಕರಣದಿಂದ ದೇಶದ ಜಿಡಿಪಿ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಅನಾಣ್ಯೀಕರಣದ ದಿಟ್ಟ ನಡೆಯನ್ನು ವಿಶ್ವವೇ ಗೌರವದಿಂದ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಹೇಜ್ ಬಂದರು ಪಟ್ಟಣದಲ್ಲಿ ಉದ್ಯಮದ ಕುರಿತ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅವರು, ೩೦,೦೦೦ ಕೋಟಿ ರೂ. ಒಎನ್ಜಿಸಿ ಪೆಟ್ರೋ ಎಡಿಷನ್ಸ್ ಲಿ. (ಒಪಿಎಎಲ್) ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ದೇಶದ ಅತೀ ದೊಡ್ಡ ಪೆಟ್ರೋಕೆಮಿಕಲ್ ಘಟಕವಾಗಿದೆ.
ಒಪಿಎಎಲ್ ಸಂಸ್ಥೆ ಒಎನ್ಜಿಸಿ, ಜಿಎಐಎಲ್ ಹಾಗೂ ಜಿಎಸ್ಪಿಸಿ ಪ್ರಾಯೋಜಿತ ಜಂಟಿ ಸಂಸ್ಥೆಯಾಗಿದೆ. ಒಪಿಎಎಲ್ 2018ರ ವೇಳೆಗೆ ಪಾಲಿಮರ್ ಕ್ಷೇತ್ರದಲ್ಲಿ ತನ್ನ ಮಾರುಕಟ್ಟೆ ಪಾಲುದಾರಿಕೆಯನ್ನು ಶೇ.14ಕ್ಕೆ ಹೆಚ್ಚಿಸುವ ಯೋಜನೆ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಪಾಲಿಮರ್ ಬಳಕೆ ಸರಾಸರಿ 32 ಕೆಜಿ.ಗೆ ಹೋಲಿಸಿದರೆ ಭಾರತದಲ್ಲಿ ಪಾಲಿಮರ್ಗಳ ಸರಾಸರಿ ಬಳಕೆ 10 ಕೆಜಿ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಒಪಿಎಎಲ್ ಘಟಕ ತನ್ನ ಪೂರ್ಣ ಸಾಮರ್ಥ್ಯದೊಂದಿಗೆ ವಾರ್ಷಿಕ 14 ಲಕ್ಷ ಮೆಟ್ರಿಕ್ ಟನ್ ಲೀನಿಯರ್ ಲೋ ಮತ್ತು ಹೈ ಡೆನ್ಸಿಟಿ ಪಾಲಿಯೆಥಿಲಿನ್, ಪೊಲಿಪ್ರೊಪೆಲಿನ್ಗಳನ್ನು ಉತ್ಪಾದಿಸಲಿದೆ. ಇದು ಬೆಂಜೀನ್, ಬ್ಯೂಟಾಡಯೀನ್, ಪೈರೋಲಿಸಿಸ್ ಗ್ಯಾಸೋಲೀನ್ ಮೊದಲಾದ 5 ಲಕ್ಷ ಟನ್ ಸಾಯನಿಕಗಳನ್ನು ಉತ್ಪಾದಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.