ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬರುವಿಕೆಯನ್ನು ವಿರೋಧಿಸಿದವರಿಗೆ ಚಪ್ಪಲಿ ಏಟು ನೀಡಬೇಕು ಎಂದಿದ್ದಿರಿ. ಸೌಹಾರ್ದದ ಮಾತೇ ಬಿಡಿ ನಿಮ್ಮದು. ಆದರೆ ಇದೀಗ ಬುರ್ಖಾಧಾರಿಣಿ ಸುಹಾನಾ ರಿಯಾಲಿಟಿ ಶೋದಲ್ಲಿ ಹಾಡು ಹೇಳಿಬಿಟ್ಟಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ. ಮಂಗಳೂರು ಮುಸ್ಲಿಂ ಎಂಬ ಫೇಸ್ಬುಕ್ ಖಾತೆಯ ಗೋಡೆಯಲ್ಲಿ ಅವಳ ನಡೆಯನ್ನು ವಿರೋಧಿಸಿ ಬರೆಯಲಾಗಿದೆ. ಅವರಿಗೆ ಏನು ಹೇಳ್ತೀರಿ ?
ಸರಿಗಮಪ ಎಂಬ ಕಾರ್ಯಕ್ರಮದಲ್ಲಿ ಸುಹಾನಾ ಬುರ್ಖಾ ಧರಿಸಿಯೇ ಹಾಡು ಹೇಳಿದ್ದಾಳೆ. ಆದರೆ, ಅನ್ಯ ಪುರುಷರ ಎದುರು ಸುಹಾನಾ ಸೌಂದರ್ಯ ತೋರಿಸಿದ್ದಾಳೆಂದು ಆರೋಪಿಸಿದ್ದಾರೆ. ಕೀಳು ಅನಿಸಲ್ಲವೇ? ಬುರ್ಖಾ ಧರಿಸಿರುವಾಗ ಸೌಂದರ್ಯ ಪ್ರದರ್ಶನವಾಗಲು ಹೇಗೆ ಸಾಧ್ಯ ? ಬಹುಶಃ ಹೆಣ್ಣಿನ ಸಹಜ ಸೌಂದರ್ಯಕ್ಕೂ ಬುರ್ಖಾ ಅಡ್ಡಿಯಾಗಿದೆ ಎಂಬ ಚರ್ಚೆಗೆ ಇದೇ ನಾಂದಿಯೂ ಆಗಬಹುದು ಬಿಡಿ.
ಪ್ರಶ್ನೆ ಅದಲ್ಲ, ಯಾಕೆ ಮುಸ್ಲಿಂ ಹುಡುಗಿ ಪ್ರತಿಭಾ ವೇದಿಕೆಯಲ್ಲಿ ಭಾಗವಹಿಸಬಾರದೇ? ಸಂಗೀತಕ್ಕೂ ಇಸ್ಲಾಂಗೂ ಸಂಬಂಧವಿಲ್ಲವೇ? ನಿಮ್ಮ ಧರ್ಮದ ಹುಡುಗಿಗೆ ಹಾಡು ಹೇಳುವ ಸ್ವಾತಂತ್ರ್ಯವೇ ಇಲ್ಲವೇ? ಅಕ್ಷರಶಃ ಸೌಹಾರ್ದಕ್ಕೆ ಮುನ್ನುಡಿ ಬರೆಯಲು ಮುಂದಾದ ಹುಡುಗಿಯನ್ನು ತಡೆಯುವುದು ಅದ್ಯಾವ ನ್ಯಾಯ ? ಇದು ನಿಮ್ಮ ಸೌಹಾರ್ದದ ಕನಸಿಗೆ ವಿರೋಧ ಎನಿಸುವುದಿಲ್ಲವೇ? ಸಂವಿಧಾನ ವಿರೋಧಿ ಎನಿಸುವುದಿಲ್ಲವೇ? ಇದು ಆರೋಗ್ಯಕರವೇ?
ಬಾಲಿವುಡ್ನಲ್ಲಿ ಖಾನ್ಗಳ ಸಾಮ್ರಾಜ್ಯವೇ ಸೃಷ್ಟಿಯಾಗಿದೆಯಲ್ಲ ? ಅದ್ಯಾವ ಹೆಂಗಸಿಗೂ ಕಮ್ಮಿ ಇಲ್ಲದಂತೆ ಅಂಗಸೌಷ್ಠವ ಪ್ರದರ್ಶಿಸುವ ಮುಸ್ಲಿಂ ಪುರುಷ ಸಿಂಹರೂ ಇದ್ದಾರಲ್ಲ, ಅವರಿಗೂ ಕಡಿವಾಣ ಹಾಕಲು ಪ್ರಯತ್ನಿಸಬೇಕು ಅನಿಸಲ್ಲವೇ ?
ಸೌಹಾರ್ದ ಸಮಾವೇಶವನ್ನು ಆಯೋಜಿಸಿದ ಮಾತ್ರಕ್ಕೆ, ಸೌಹಾರ್ದ ಸಮಾವೇಶದಲ್ಲಿ ಭಾಗವಹಿಸಿದ ಮಾತ್ರಕ್ಕೆ ಸೌಹಾರ್ದ ಸಾಧಿಸಲು ಸಾಧ್ಯವೇ? ನುಡಿದಂತೆ ನಡೆಯಬೇಕಲ್ಲವೇ? ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಈ ಕುರಿತು ಪ್ರತಿಕ್ರಿಯಿಸಿಬೇಕಿದೆ.
ಕೆಂಪು ಬಾವುಟಗಳು ಬೀದಿಗೆ ಬರಲಿ
ಪಿಣರಾಯಿ ವಿಜಯನ್ ಬಂದಾಗ ರಾರಾಜಿಸಿದ ಸೌಹಾರ್ದದ ಕೆಂಪು ಬಾವುಟಗಳು ಈಗ ಬೀದಿಗೆ ಬರಬೇಕು. ರಾಜಕೀಯ ಹತ್ಯೆಗಳ ನೇತಾರನ ಆಗಮನದಲ್ಲೂ ಸೌಹಾರ್ದ ಕಂಡ ಕೆಂಪು ಪ್ರತಿನಿಧಿಗಳು, ಸುಹಾನಾ ಬೆಂಬಲಕ್ಕೆ ನಿಲ್ಲಬೇಕಲ್ಲವೇ? ಅವಳಿಗಿಲ್ಲದ ಸ್ವಾತಂತ್ರ್ಯವನ್ನು ದಕ್ಕಿಸಿಕೊಡಬೇಕಲ್ಲವೇ ?
ಹಿರಿಯ ಮನಸುಗಳೊಂದಿಗೆ ಹೆಜ್ಚೆ ಹಾಕಿದ ಹೊಸ ಕೆಂಪು ಕನಸುಗಳು, ದೆಹಲಿಯ ಜೆಎನ್ಯು, ರಾಮ್ಜಾಸ್ ಕಾಲೇಜಿನ ಪ್ರಕರಣದಲ್ಲಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಂಡವರು, ರಾಜಕೀಯ ನೇತಾರರು, ಬುದ್ಧಿ ಜೀವಿಗಳು ಸುಹಾನಾ ಬೆಂಬಲಕ್ಕೆ ನಿಲ್ಲಬೇಕಲ್ಲವೇ? ಇಲ್ಲದಿದ್ದಲ್ಲಿ ಸೌಹಾರ್ದ, ಸ್ವಾತಂತ್ರ್ಯ ಪದಗಳು ಅರ್ಥಕಳೆದುಕೊಳ್ಳುವುದಿಲ್ಲವೇ? ಹೋರಾಟಗಳೆಲ್ಲ ಢೋಂಗಿ, ಅವಕಾಶವಾದಿತನದ ದ್ಯೋತಕ ಎನಿಸಿವುದಿಲ್ಲವೇ? ವಾಸ್ತವಿಕ ನೆಲೆಗಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.