ಧಾರವಾಡ: ವಿಶ್ವದಲ್ಲಿ ಯಾವುದೂ ಶಾಶ್ವತವಲ್ಲ. ಒಂದಿಲ್ಲೊಂದು ದಿನ ಕರಗಿಹೋಗುತ್ತವೆ. ಹಾಗೇ ಮನುಷ್ಯನು ಇದಕ್ಕೆ ಹೊರತಾಗಿಲ್ಲ. ದೇಹ (ಮನುಷ್ಯ) ಕಾಲದ ಉರಿಯಲ್ಲಿ ಕರಗಲಿರುವ ನಿಸರ್ಗ ನಿರ್ಮಾಣದ ಪುತ್ಥಳಿ. ಆದರೆ, ಮನುಷ್ಯ ಮೋಹ ಬಿಡುತ್ತಿಲ್ಲ. ಇದಕ್ಕೆ ಅಸದ್ಭಾವ ಕಾರಣ.
ಈ ಅಸದ್ಭಾವ ತೊಡೆದು ಹಾಕಿ ಸದ್ಭಾವನೆ ಬೆಳೆಸಿಕೊಳ್ಳುವಲ್ಲಿ ಕೆಲ ಸಮಸ್ಯೆ, ಸಂಗತಿ ಮನುಷ್ಯನ ಭಾವ ಕೆಡಿಸುತ್ತದೆ. ಭಾವಕ್ಕೆ ಬಯಸಿದ್ದು ಮಾಡುವಂತ ಸಾಮರ್ಥ್ಯ ಇರುವ ಕಾರಣಕ್ಕೆ ಮನುಷ್ಯನ ವಿನಾಶಕ್ಕೂ ಅದುವೇ ಕಾರಣ. ಸದ್ಭಾವ ಇದ್ದಾಗಲೇ ಜೀವನದ ಸದಭಿರುಚಿ ಹೆಚ್ಚುತ್ತದೆ.
ಅಲ್ಲಮಪ್ರಭು ದೇವರು ’ಬಯಲೇ ಜೀವನ’ ಎಂದು ಉದ್ಘೋಷಿಸಿದರು. ಜಗತ್ತು ತುಂಬಿರುವುದೇ ಇದರಿಂದ ಹೀಗಾಗಿ ಭೂಮಿ, ಮೋಹ, ಸಂಪತ್ತು, ಆಸೆಗಳನ್ನು ತೊರೆದು ಬದುಕಿದರು. ನಾನು ಅಂದ್ರೆ ಇಬ್ಬರ ನಡುವೆ ಸಂಘರ್ಷ ಆರಂಭ. ನಾನಲ್ಲ ಅಂದ್ರೆ ಭಾವ ಕೆಡಲ್ಲಂಬ ಅರ್ಥ ತಿಳಿಸಿದರು.
ಅದಕ್ಕೆ ಅಲ್ಲಮರು ಅರಗಿನ ಪುತ್ಥಳಿಗೆ ಊರಿಕೊಟ್ಟಡೆ ಉದಕ ಬಾಯಾರಿ ಬಳಲುತಿದೆ ನೋಡಾ..! ಅಂದ್ರೆ, ಮನೆಗೆ ಹೊತ್ತಿದ ಬೆಂಕಿ ಆರಿಸಬಹುದು. ಆದರೆ, ಕಣ್ಣಿಗೆ ಗೋಚರಿಸದಂತಹ ಕಾಲಚಕ್ರಕ್ಕೆ ಹತ್ತಿದ ಬೆಂಕಿ ನಂದಿಸಲು ಸಾಧ್ಯವೇ? ನೀರಿಗೆ ಬಾಯಾರಿಕೆ ಆದಾಗ ದಾಹ ತಣಿಸಲು ಸಾಧ್ಯವೇ?
ಭೂಮಿ, ಸೂರ್ಯ, ನಕ್ಷತ್ರ, ಸಾಗರ, ಸರೋವರ, ಮಣ್ಣು, ನೀರು, ಗಾಳಿ ಎಲ್ಲವನ್ನೂ ಕಾಲವೂ ನುಂಗಿ ಹಾಕುವಾಗ. ಇನ್ನು ಮನುಷ್ಯ ಯಾವ ಲೆಕ್ಕ? ಎಂಥ ಯೋಗಿ-ಯೋಗಿಗಳೇ ಕಾಲಚಕ್ರಕ್ಕೆ ಸಿಲುಕಿ ಕಾಲವಾಗಿ ಹೋಗಿದ್ದಾರೆ. ಎಲ್ಲವೂ ಕಾಲದ ಉರಿಯಲ್ಲಿ ಕರಿಗಿ ಹೋಗುವುದು ನೋಡಾ..!
ಈ ಮಾತನ್ನು 900 ವರ್ಷಗಳ ಹಿಂದೆಯೇ ಅಲ್ಲಮರು ಜಗತ್ತು ನೋಡಿದ ದೃಷ್ಟಿ ತೆರೆದಿಟ್ಟರು. ಈ ಮನುಷ್ಯನಿಗೆ ಅರ್ಥವಾಗಿಲ್ಲ. ಬಯಸಿ ಬಳಲಬಾರದು. ನಾಮ, ಕೀರ್ತಿ, ಐಶ್ವರ್ಯ ಎಲ್ಲಾ ಜಗತ್ತಲ್ಲಿ ನಶ್ವರ. ನಾಲ್ಕು ಜನರು ಹೊಗಳಿದರೆ ಕೀರ್ತಿ ಅಲ್ಲ, ವಿಶ್ವವೇ ಕೊಂಡಾಡಬೇಕು ಅದು ಕೀರ್ತಿ.
ಮನುಷ್ಯನ ಆಸೆ ಬತ್ತದ ಬಾವಿ. ಅಗೆದಾತ ಸತ್ತ ನಂತರವೇ ಆಸೆಯ ಬಾವಿ ಬತ್ತಲಿದೆ. ಮನಸ್ಸು ಅತೃಪ್ತಿ, ಬಯಕೆ ಬಾಯಾರಲ್ಲ. ಪುನಃ-ಪುನಃ ತೋಡುತ್ತಲೇ ಇರುತ್ತಾನೆ. ಇಂಥ ಜತ್ತಿನಲ್ಲಿ ಶಾಂತಿ ಎಲ್ಲಿಂದ ಬರಬೇಕು. ಎಲ್ಲರೂ ಬಾಯಾರಿ-ಬಾಯಾರಿ ಬಳುತ್ತಿದ್ದಾರೆ. ಮೊದಲು ಆಸೆ ತೋರೆಯಿರಿ.
ಅದಕ್ಕೆ ಬಸವಣ್ಣ ಎಲೋ ಮಾನವ ಅಳಿಯಾಸೆ(ತೀರಲಾರದ, ಕ್ಷುಲ್ಲಕ, ಅರ್ಥವಿಲ್ಲದ) ಬೇಡವೋ ಎಂಬ ಅದ್ಭತ ಮಾತು ಆಡಿದರು. ಕಾಣದ ಬೆಳದಿಂಗಳ ಸಿರಿ ನೆಚ್ಚಿ ಕೂಡಬೇಡ. ಇರೋದು ಕಡಿಮೆ. ಅದಕ್ಕಾಗಿ ಮನಸ್ಸಿನಲ್ಲಿ ಅಸಾದ್ಭಾವ ತೆಗೆದು ಹಾಕಿ, ಸದ್ಭಾವ ಬೆಳೆಸಿಕೊಂಡ ಜೀವನ ಸಮೃದ್ಧ ಮಾಡಿಕೋ.
ಪ್ರವಚನ: ಶ್ರೀ ಸಿದ್ದೇಶ್ವರ ಸ್ವಾಮೀಜಿ, 9 ನೇ ದಿನ 05-3-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.