ದಂತೇವಾಡ: ಹೆಗಲ ಮೇಲಿನ ನೇಗಿಲಿನಿಂದ ಅಭಿವೃದ್ಧಿ ಸಾಧ್ಯವೇ ಹೊರತು ಗನ್ನಿಂದ ಸಾಧ್ಯವಿಲ್ಲ, ಹಿಂಸೆಗೆ ಎಂದೂ ಭವಿಷ್ಯವಿಲ್ಲ, ಶಾಂತಿಗೆ ಮಾತ್ರ ಭವಿಷ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಶನಿವಾರ ಛತ್ತೀಸ್ಗಢದ ದಂತೇವಾಡ ಮತ್ತು ಬಸ್ತರ್ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕಾರಣಕ್ಕೂ ನಿರಾಶರಾಗಬೇಡಿ, ನಕ್ಸಲ್ ಚಟುಚಟಿಕೆಯ ವಿರುದ್ಧ ನಾವು ಹೋರಾಡುತ್ತೇವೆ ಎಂದು ಭರವಸೆ ನಿಡಿದರ ಅವರು, ಬಸ್ತರ್ನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ರೂ.೨೪ ಸಾವಿರ ಕೋಟಿಯ ಯೋಜನೆಗೆ ಚಾಲನೆ ಕೊಡಲಾಗಿದೆ ಎಂದರು.
ಬಸ್ತರ್ನ ಭೂಮಿ ಜೀವನದ ಮಾರ್ಗವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿದೆ ಎಂದರು.
ಬಳಿಕ ಅವರು ಲೈವ್ಲಿಹುಡ್ ಶಾಲೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸಿದರು. ದಂತೇವಾಡದಲ್ಲೂ ಅವರು ಮುಖ್ಯಮಂತ್ರಿ ರಮಣ್ಸಿಂಗ್ ಅವರೊಂದಿಗೆ ಸಮಾವೇಶ ನಡೆಸಿ ಮಾತನಾಡಿದರು.
ಮೋದಿ ಆಗಮನವನ್ನು ವಿರೋಧಿಸಿ ನಕ್ಸಲರು ಕಿರಂದುಲ್ ಮತ್ತು ವಿಶಾಖಪಟ್ಟಣಂ ರೈಲ್ವೇ ಮಾರ್ಗದಲ್ಲಿ ಸ್ಫೋಟವನ್ನು ನಡೆಸಿದ್ದಾರೆ. ಅಲ್ಲದೇ ಬಂದ್ಗೂ ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.