ನವದೆಹಲಿ: ದೆಹಲಿ- ಎನ್ಸಿಆರ್ ಪ್ರದೇಶಗಳಲ್ಲಿ ಸಾವಿರು ಟ್ರಕ್ಗಳ ಸಂಚಾರದಿಂದ ಉಂಟಾಗುವ ವಾಯು ಮಾಲಿನ್ಯ ತಗ್ಗಿಸಲು ಟ್ರಕ್ಗಳನ್ನು ರೈಲುಗಳಲ್ಲಿ ಸಾಗಿಸುವ ‘ಗ್ರೀನ್ ಟ್ರಾನ್ಸ್ಪೋಟ್’ ಉಪಕ್ರಮವನ್ನು ಭಾರತೀಯ ರೈಲ್ವೆ ಘೋಷಿಸಿದೆ.
ದೆಹಲಿಯ ಗಾರ್ಹಿ ಹರ್ಸರು ಹಾಗೂ ಮುರಾದ್ನಗರ್ ನಡುವೆ ರೈಲುಗಳಲ್ಲಿ ಟ್ರಕ್ಗಳನ್ನು ಸಾಗಿಸುವ ಉಪಕ್ರಮ ಗುರುವಾರದಿಂದ ಆರಂಭವಾಗಲಿದೆ.
ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಈ ಉಪಕ್ರಮಕ್ಕೆ ಗುರುವಾರ ಚಾಲನೆ ನೀಡಿದ್ದಾರೆ. ಅವರು ಕಳೆದ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಘೋಷಿಸಿದ್ದರು.
ಹಸಿರು ಸಾರಿಗೆ ಉಪಕ್ರಮದ ಅಡಿಯಲ್ಲಿ ರೈಲ್ವೆ ಸಚಿವಾಲಯ ರೋ-ರೋ (ರೋಲ್ ಆಫ್-ರೋಲ್ ಆನ್) ಸೇವೆಯನ್ನು ಆರಂಭಿಸಲಿದೆ. ದೆಹಲಿ-ಎನ್ಸಿಆರ್ಗಳಲ್ಲಿ ಕಾರ್ಬನ್ ಹೊರಸೂಸುವಿಕೆ ತಗ್ಗಿಸಲು ಹಾಗೂ ರೈಲ್ವೆ ಸರಕು ಸೇವೆಯನ್ನು ಆಕರ್ಷಿಸಲು ಪ್ರಾಯೋಗಿಕವಾಗಿ ಈ ಸೇವೆ ಆರಂಭಿಸಲಿದೆ.
ಈ ಸೇವೆಯಿಂದ ದೆಹಲಿ-ಎನ್ಸಿಆರ್ ಪ್ರದೇಶಗಳಲ್ಲಿ ವಾಯು ಮತ್ತು ಶಬ್ದ ಮಾಲಿನ್ಯ ಕಡಿಮೆಯಾಗಲಿದ್ದು, ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ.
ರೈಲ್ವೆ ಇಲಾಖೆಯ ಸರಕು ಮತ್ತು ಪ್ರಯಾಣಿಕ ವ್ಯಾಪಾರ ಕ್ರಿಯಾ ಯೋಜನೆಯು ವಿತರಣಾ ವ್ಯವಸ್ಥೆಯನ್ನು ಹೆಚ್ಚಿಸಲಿದ್ದು, ಉತ್ತಮ ತೃಪ್ತಿದಾಯಕ ಪ್ರಯಾಣ ನುಭವ ನೀಡಲಿದೆ. ಅಂಚೆ ಇಲಾಖೆಯೊಂದಿಗೆ ಒಪ್ಪಂದದ ಮೂಲಕ ಪಾರ್ಸೆಲ್ ವಹಿವಾಟು ಹೆಚ್ಚಿಸುವುದು, ಕಾಗದ ರಹಿತ ವ್ಯವಹಾರಕ್ಕೆ ಪರಿವರ್ತನೆ, ನಗದು ರಹಿತ ಮತ್ತು ಆಧಾರ್ ಆಧಾರಿತ ಟಿಕೆಟ್ ಬುಕಿಂಗ್ ವ್ಯವಸ್ಥೆ ಒದಗಿಸಲಿದೆ.
ರೈಲ್ವೆಯು ಒಟ್ಟು ಸರಕು ಆದಾಯ ಏರಿಕೆ ಬೆಳವಣಿಗೆ ಆಧಾರದಲ್ಲಿ ದೀರ್ಘಕಾಲಿಕ ಸರಕು ಸಂಪರ್ಕಗಳಿಗೆ ಶೇ.1.5ರಿಂದ ಶೇ.35ರಷ್ಟು ರಿಯಾಯಿತಿ ನೀಡಲಿದೆ. ದೀರ್ಘಕಾಲಿಕ ಸುಂಕ ಒಪ್ಪಂದಗಳು 3-4 ವರ್ಷ ಇರಲಿದೆ ಎಂದು ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.