ನವದೆಹಲಿ: ಅತ್ಯಾಚಾರದ ಬೆದರಿಕೆಗೆ ಒಳಗಾದವಳು ಮಾಧ್ಯಮಕ್ಕೆ ಮೊರೆ ಹೋದರೆ, ಎಬಿವಿಪಿ ಸಂಘಟನೆ ಅವಳ ಪರವಾಗಿ ದೆಹಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ, ತನಿಖೆಗೆ ಆಗ್ರಹಿಸಿದೆ.
ದೆಹಲಿ ವಿಶ್ವವಿದ್ಯಾಲಯದ ರಾಮ್ಜಾಸ್ ಕಾಲೇಜಿನಲ್ಲಿ ಘಟನೆ ಅನೇಕ ತಿರುವುಗಳನ್ನು ಪಡೆದಿದೆ. ಕೊನೆಗೆ ಹುತಾತ್ಮ ಯೋಧನ ಪುತ್ರಿ ಲೇಡಿ ಶ್ರೀ ರಾಮ ಕಾಲೇಜಿನ ಗುರ್ಮೆಹರ್ ಕೌರ್ ತನಗೆ ಎಬಿವಿಪಿ ಸಂಘಟನೆಯವರು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಳು.
’ತನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ’, ’ನಾನು ಒಂಟಿಯಲ್ಲ, ನನ್ನೊಂದಿಗೆ ಭಾರತದ ಪ್ರತಿ ವಿದ್ಯಾರ್ಥಿಯೂ ಇದ್ದಾರೆ’ ಹೀಗೇ ಸಾಮಾಜಿಕ ಜಾಲತಾಣದಲ್ಲಿ ಕ್ಷಣಕ್ಕೊಂದು ಸ್ಟೇಟಸ್ ಅಪ್ಲೋಡ್ ಮಾಡುತ್ತ ರಾಜಕೀಯ ಕೆಸರೆರಚಾಟಕ್ಕೂ ಕಾರಣರಾಗಿದ್ದಳು.
ಮಹತ್ವದ ಸಂಗತಿ ಎಂದರೆ, ಅತ್ಯಾಚಾರ ಬೆದರಿಕೆ ಬಂದಾಗ ಕೌರ್ ಪೊಲೀಸರಿಗೆ ದೂರು ಸಲ್ಲಿಸುವ ಬದಲು ಮಾಧ್ಯಮದ ಬಳಿಗೆ ಹೋಗ್ತಾರೆ. ಪಾಪ ತನ್ನೆದುರು ದೂರು ಬಂದಿದ್ದಕ್ಕಾಗಿ ಪೊಲೀಸ್ ಇಲಾಖೆಗೆ ನೋಟಿಸ್ ರವಾನೆ ಮಾಡಿ, ತನಿಖೆ ಕೈಗೊಳ್ಳುವಂತೆ ಕೋರಿದೆ.
ಎಬಿವಿಪಿ ಸಂಘಟನೆಯೇ ಇದೀಗ ಕೌರ್ ಪರವಾಗಿ ದೆಹಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ. ಅತ್ಯಾಚಾರದ ಬೆದರಿಕೆ ಒಡ್ಡಿದವರನ್ನು ಪತ್ತೆ ಹಚ್ಚಿ ಬಂಧಿಸುವ ಮೂಲಕ, ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಲಾಗಿದೆ.
ಗಮನಾರ್ಹ ಸಂಗತಿ ಎಂದರೆ ಒಂದೇ ದಿನದಲ್ಲಿ ಕೌರ್ ಪ್ರತಿಭಟನೆಯಿಂದ ಹಿಂದೆ ಸರಿದಿರುವುದಾಗಿ ಘೋಷಿಸಿಕೊಂಡಿದ್ದಾಳೆ. ತನ್ನೆಲ್ಲ ಪ್ರತಿಭಟನೆಗಳನ್ನು ವಿತ್ಡ್ರಾ ಮಾಡಿಕೊಂಡಿರುವ ಕೌರ್, ಅತ್ಯಾಚಾರ ಆರೋಪವನ್ನೂ ವಿತ್ಡ್ರಾ ಮಾಡಿಕೊಳ್ತಾರೋ ಹೇಗೇ ? ಕಾದು ನೋಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.