ನವದೆಹಲಿ: ಗೋಪಾಲ್ ಬಾಗ್ಲೆ ಅವರನ್ನು ವಿದೇಶಾಂಗ ಸಚಿವಾಲಯದ ನೂತನ ವಕ್ತಾರರಾಗಿ ನೇಮಕ ಮಾಡಲಾಗಿದೆ.
ಅಧಿಕೃತ ವಕ್ತಾರರಾಗಿ ಅಧಿಕಾರ ಸ್ವೀಕರಿಸಲು ಸಂತಸವಾಗುತ್ತಿದೆ. ಹಿಂದಿನ ಅಧಿಕಾರಿಗಳು ಸ್ಥಾಪಿಸಿರುವ ಉನ್ನತ ಸಂಪ್ರದಾಯಗಳನ್ನು ಮುಂದುವರೆಸಲು ಹೆಚ್ಚಿನ ಸಹಕಾರ ಪಡೆಯುವ ಬಗ್ಗೆ ಭರವಸೆ ಇದೆ ಎಂದು ಗೋಪಾಲ್ ಬಾಗ್ಲೆ ಹೇಳಿದ್ದಾರೆ.
‘ಇಂದು ನಾನು ನನ್ನ ಅಧಿಕೃತ ವಕ್ತಾರ ಸ್ಥಾನಕ್ಕೆ ವಿದಾಯ ಹೇಳುತ್ತಿದ್ದು, ಇದು ಒಂದು ಅಸಾಮಾನ್ಯ ಗೌರವವಾಗಿದೆ. ನೀವು ನಿಮ್ಮ ಹೊಸ ಪಾತ್ರದಲ್ಲಿ ನನ್ನನ್ನು ಅನುಸರಸಬಹುದು ಎಂದು ವಿಕಾಸ್ ಸ್ವರೂಪ್ ಟ್ವೀಟ್ ಮೂಲಕ ಗೋಪಾಲ್ ಅವರಿಗೆ ತಿಳಿಸಿದ್ದಾರೆ.
ಗೋಪಾಲ್ ಬಾಗ್ಲೆ ಅವರು ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಇರನ್ನ ವಿದೇಶಾಂಗ ಸಚಿವಾಯಗಳ ಪ್ರಾದೇಶಿಕ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು.
ವಿಕಾಸ್ ಸ್ವರೂಪ್ ಅವರು ಕೆನಡಾದ ಭಾರತೀಯ ಹೈ ಕಮಿಷನರ್ ಆಗಿ ನೇಮಕಗೊಂಡಿದ್ದು, ಕೆನಡಾಕ್ಕೆ ತೆರಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.