ಮುಜಾಫರ್ಪುರ್: ಸಲ್ಮಾನ್ ಖಾನ್ ವಿರುದ್ಧ ಬಂದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಬೀದಿ ಬದಿಯಲ್ಲಿ ಮಲಗುವವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ ಮತ್ತು ಆಭರಣ ವಿನ್ಯಾಸಕಿ ಫರಾ ಅಲಿ ಖಾನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜಿಲ್ಲಾ ನ್ಯಾಯಾಲಯ ಸೂಚನೆ ನೀಡಿದೆ.
ಈ ಇಬ್ಬರ ವಿರುದ್ಧ ವಕೀಲ ಸುಧೀರ್ ಕುಮಾರ್ ಓಜಾ ಎಂಬುವವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಅಡಿಷನಲ್ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ರಾಮ್ ಚಂದ್ರ ಪ್ರಸಾದ್ ಅವರು ಫರಾ ಮತ್ತು ಅಭಿಜಿತ್ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಖಾಜಿ ಮೊಹಮ್ಮದ್ಪುರ ಪೊಲೀಸ ಸ್ಟೇಶನ್ಗೆ ಸೂಚನೆ ನೀಡಿದ್ದಾರೆ.
ದಂಗೆಯೆಬ್ಬಿಸಲು ಪ್ರೇರಣೆ ನಿಡುವಂತಹ ಹೇಳಿಕೆ, ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಹುನ್ನಾರ ಮುಂತಾದ ಹಲವು ಅಪರಾಧಗಳ ಅಡಿಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಲಾಗಿದೆ.
ರಸ್ತೆಯಲ್ಲಿ ಮಲಗಿದರೆ ನಾಯಿಗಳಂತೆಯೇ ಸಾಯುತ್ತಾರೆ ಎಂದು ಅಭಿಜಿತ್ ಹೇಳಿಕೆ ನೀಡಿದ್ದರು, ಫರಾ ಕೂಡ ಬೀದಿಯಲ್ಲಿ ಮಲಗುವ ಬಡವರ ಬಗ್ಗೆ ತುಚ್ಛ ಮಾತಗಳನ್ನಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.